ಕೈಕಂಬ: ಯುವವಾಹಿನಿ (ರಿ) ಕುಪ್ಪೆಪದವು-ಎಡಪದವು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕುಪ್ಪೆಪದವಿನ ಅನoತ್ರಾಜ ಸಭಾಭವನದಲ್ಲಿ ಭಾನುವಾರ ನಡೆಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯರಾಮ ಪೂಜಾರಿ, ಕೆಲವು ಸಂಘ ಸಂಸ್ಥೆಗಳು ಪ್ರಾರಂಭಗೊಂಡು, ಒಂದೆರಡು ವರ್ಷಗಳಲ್ಲಿಯೇ ಅಸ್ತಿತ್ವವನ್ನು ಕಳೆದುಕೊಳ್ಳುವ ಈ ಕಾಲಘಟ್ಟದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯೊಂದಿಗೆ ಸುಮಾರು ಮೂವತ್ತೈದು ಘಟಕಗಳನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿ ವಿವಿಧ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿರುವ ಸಂಸ್ಥೆಯ ಕುಪ್ಪೆಪದವು ಘಟಕಕ್ಕೆ ಎಡಪದವುಗ್ರಾಮವನ್ನು ಸೇರ್ಪಡೆಗೊಳಿಸಿದ್ದು ಸಂತೋಷ ತಂದಿದೆ.

ಯುವವಾಹಿನಿಯ ಯಾವುದೇ ಕಾರ್ಯಕ್ರಮ ನಡೆಸುವುದಕ್ಕೆ ಎಡಪದವು ನಾರಾಯಣ ಗುರು ಸಭಾಭವನ ಮುಕ್ತವಾಗಿರುತ್ತದೆ, ಎಂದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಆಕ್ಷಿತ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆಸಲು ಸಹಕರಿಸಿದ ಎಲ್ಲಾ ಯುವವಾಹಿನಿ ಸದಸ್ಯರಿಗೂ ಕೃತಜ್ಞತ ಸಲ್ಲಿಸಿದರು. ಶ್ರೀಮತಿ ಸೌಮ್ಯ ಕೋಟ್ಯಾನ್ ನೂತನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾಗಿ ಶ್ರೀಧರ್ ಪೂಜಾರಿ, ಕಾರ್ಯದರ್ಶಿಯಾಗಿ ಶ್ರೀಮತಿ ಅಕ್ಷತಾ, ಉಪಾಧ್ಯಕ್ಷರಾಗಿ ಗೋಪಾಲ ಪೂಜಾರಿ( ಗಂಗಾಧರ್) ಕೋಶಾಧಿಕಾರಿಯಾಗಿ ಶ್ರೀಮತಿ ರಜನಿ ಕುಂದರ್ ಹಾಗು ವಿವಿಧ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಮಾತನಾಡಿ, ಕಳೆದ ಮೂವತ್ತೇಳು ವರ್ಷಗಳಿಂದ ಮೂವತ್ತೈದು ಘಟಕಗಳನ್ನು ಹೊಂದಿರುವ ನಮ್ಮ ಸಂಸ್ಥೆಯು ವಿದ್ಯೆ ಉದ್ಯೋಗ ಸಂಪರ್ಕ ಎಂಬ ಧ್ಯೇಯೋದ್ದೇಶದೊಂದಿಗೆ, ಸಮಾಜಕ್ಕೆ ವಿವಿಧ ಕೊಡುಗೆಗಳನ್ನು ನೀಡುತ್ತಾ ಬಂದಿದೆ, ಅದರಲ್ಲಿ ಕುಪ್ಪೆಪದವು ಎಡಪದವು ಘಟಕವು ಹಲವಾರು ಸಮಾಜಮುಖಿ ಕಾರ್ಯ ನಡೆಸಿಕೊಂಡು ಬಂದಿರುತ್ತದೆ.

ಇಂಥಾ ಕಾರ್ಯವು ಇನ್ನಷ್ಟು ನಡೆಯುವಂತಾಗಲಿ ಎಂದರು, ನಿವೃತ್ತ ಶಿಕ್ಷಕಿ ಶ್ರೀಮತಿ ವಿಜಯಮ್ಮ, ಕುಪ್ಪೆಪದವು ಆರೋಗ್ಯ ಕೇಂದ್ರದ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಚಂದ್ರಶೇಖರ ಸೂರ್ಲ ಬಡಗಬೆಳ್ಳೂರು ಅವರನ್ನು ಗೌರವಿಸಲಾಯಿತು.
ನೃತ್ಯಗಾರ್ತಿ ಕುಮಾರಿ ಸಾಕ್ಷ ಎಡಪದವು ಗೌರವಾರ್ಪಣೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಆರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಜೀವ ಪೂಜಾರಿ, ಭರತ್ ಕೆಂಜಾರು, ಸೋಮಶೇಖರ್ ಕೋಟ್ಯಾನ್ ಇರುವೈಲು ಉಪಸ್ಥಿತರಿದ್ದರು.
ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಇದ್ದರು.
ಅಜಯ್ ಅಮೀನ್ ನಾಗಂದಡಿ ಸ್ವಾಗತಿಸಿದರು. ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ರೇಣುಕಾ ವರದಿ ಮಂಡಿಸಿದರು. ಕುಮಾರಿ ದನ್ಯಶ್ರೀ,ಹಾಗು ಕುಮಾರಿ ಬಿಂದ್ಯ ನಿರೂಪಿಸಿದರು, ಅಕ್ಷತಾ ವಂದಿಸಿದರು.
