ಕೈಕಂಬ: ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ದ ಬಳಿ ಇರುವ ರಾಣೆ ಯಾರ್ (ರಾಣ್ಯ )ಸಮುದಾಯದವರು ಅನಾದಿಕಾಲದಿಂದಲೂ ಆರಾಧಿಸಿ ಕೊಂಡು ಬಂದಿರುವ ಕಂದಾವರ ಬಾಳಿಕೆ ಬೆಟ್ಟು ಶ್ರೀ ಮಾಹಾ ಮ್ಮಾಯಿ ಕ್ಷೇತ್ರದ ಜೀರ್ಣೋದ್ದಾರ ದ ಸಮಾಲೋಚನಾ ಸಭೆಯು ಜೂ.22ರಂದು ಭಾನುವಾರ ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಮಾತನಾಡಿ ಜೀರ್ಣೋದ್ದಾರಗೊಳ್ಳುವ ನಮ್ಮ ಹಿಂದೂ ಧರ್ಮದ ಯಾವುದೇ ಶ್ರದ್ಧಾ ಕೇಂದ್ರ ವಿರಲಿ ಶಾಸಕನಾಗಿ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹಿಂದೂ ದೇವಾಲಯಗಳು ಜೀರ್ಣೋದ್ದಾರ ಗೊಂಡಲ್ಲಿ ನಮ್ಮ ಹಿಂದೂ ಸಮಾಜ ಸದೃಢ ಗೊಳ್ಳುತ್ತದೆ. ಈ ಕ್ಷೇತ್ರದ ಅಭಿ ವೃದ್ಧಿಗೆ ದೊಡ್ಡ ಮೊತ್ತದ ದೇಣಿಗೆ ನೀಡುವುದರ ಜೊತೆಗೆ ಸರ್ವ ಕಾರ್ಯದಲ್ಲೂ ಸಹಕರಿಸುವೆ ಎಂದರು.

ಪ್ರಸಿದ್ಧ ವಾಸ್ತು ತಜ್ಞರಾದ ಬ್ರಹ್ಮರ್ಷಿ ವೇದ ಮೂರ್ತಿ ಕುಡುಪು ಕೃಷ್ಣ ರಾಜ ತಂತ್ರಿ ಗಳು ಮಾತನಾಡಿ ದೇವರ ಇಚ್ಛೆ ಇಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲ ಈ ಮಹಮ್ಮಾಯಿ ಕ್ಷೇತ್ರದ ಅಭಿವೃದ್ಧಿಗೆ ಸಕಾಲ ಕೂಡಿ ಬಂದಿದೆ ಮಾಹಾಮ್ಮಾಯಿ ಸೇವಾ ಸಮಿತಿ ಮತ್ತು ಸ್ಥಳದಾನ ನೀಡಿದ ಕಂದಾವರ ಬಾಳಿಕೆ ಮನೆತನ ಹಾಗೂ ಕಂದಾವರ ಗ್ರಾಮಸ್ಥರ ಸರ್ವ ಸಹಕಾರ ದಿಂದ ಈ ಪುಣ್ಯ ಕಾರ್ಯ ಶೀಘ್ರ ನೆರವೇರಲಿ ಎಂದು ಶುಭ ಹಾರೈಸಿದರು.

ಕಂದಾವರ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮೊಕ್ತೇಸರ ಹಾಗೂ ಪ್ರಸಿದ್ಧ ಅಂತರಾಷ್ಟ್ರೀಯ ಕ್ರೀಡಾ ಪಟು ಕಂದಾವರ ಬಾಳಿಕೆ ಶ್ರೀಧರ ಆಳ್ವ ಅಧ್ಯಕ್ಷತೆ ವಹಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯರಾದ ಬೈಲು ಮೂಡುಕರೆ ದೇವದಾಸ್ ನಾಯ್ಕ್. ವಿಠ್ಠಲ್ ದಾಸ್ ಹೆಗ್ಡೆ ಕಂದಾವರ ಬಾಳಿಕೆ. ಸುಬ್ರಹ್ಮಣ್ಯ ಮಾರ್ಲ. ವಿನೋದ್ ಮಾಡ. ಪ್ರಕಾಶ್. ವಿ. ಶೆಟ್ಟಿ. ಸೇಸಪ್ಪ ಮಹಾಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷರಾದ ದೊಂಬಯ್ಯ , ಸೋಹನ್ ಅಧಿಕಾರಿ. ಚಂದ್ರಹಾಸ ಶೆಟ್ಟಿ ನಾರಳ. ಶ್ರವಣ್ ಶೆಟ್ಟಿ ,ಲಕ್ಷ್ಮಿನಾರಾಯಣ ಉಡುಪ ರೂಪೇಶ್ ಕುಮಾರ್ ಅದ್ಯ ಪಾಡಿ,ಉಮೇಶ್ ಮೂಲ್ಯ , ಗುತ್ತಿಗೆದಾರ ರಾಜೇಂದ್ರ ಕಿನ್ನಿಕಂಬಳ. ನಾರಾಯಣ ಶೆಟ್ಟಿ. ಚಂದ್ರ ಹಾಸ ಶೆಟ್ಟಿ ಕಂದಾವರ ಹೊಸ ಮನೆ , ಕಾರ್ಯ ದರ್ಶಿ ಸೀತಾರಾಮ ರಾಣ್ಯ , ಮಹಾಬಲ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ದೊಂಬಯ್ಯ ಪ್ರಸ್ತಾವಿಸಿದರು ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *