ಅಮ್ಮುಂಜೆ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ
ಕೈಕಂಬ: ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪ್ರಾಯಶ್ಚಿತ್ತದ ಬಗ್ಗೆ, ಶ್ರೀ ಕ್ಷೇತ್ರದಲ್ಲಿ ಜೂ. ೨೨ರಂದು ಭಾನುವಾರ ಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀ ಶಶಿಧರ ಭಟ್ ಇವರ ಉಪಸ್ಥಿಯಲ್ಲಿ ಮೃತ್ಯುಂಜಯ ಹೋಮವು ಜರಗಿತು.


ಕ್ಷೇತ್ರದ ಆಡಳಿತ ಮೊಕ್ತೇಸರ ಡಿ.ಎ ನಾಗೇಶ್ ರಾವ್, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೋಮಶೇಖರ ಶೆಟ್ಟಿ,ಉಮೇಶ್ ಸಾಲ್ಯಾನ್ ಬೆಂಜನಪದವು, ದೇವುದಾಸ್ ಹೆಗ್ಡೆ ಅಮ್ಮುಂಜೆಗುತ್ತು,ಸಿ.ಎ ಸುದೇಶ್ ರೈ ಬಾರಿಂಜೆ, ರಾಧಕೃಷ್ಣತಂತ್ರಿ ಪೊಳಲಿ, ಎ.ವಿನೋದ್ ನಾÊಕ್ ಅಮ್ಮಂಜೆಗುತ್ತು ಹಾಗೂ ಜೀಣೋದ್ಧಾರ ಸಮಿತಿ ಅಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.




