ಪೊಳಲಿ:ಕರಿಯಂಗಳ ಗ್ರಾಮದ ಪುಂಚಮೆ ಹೈನಿಗಾರಿಕೆ ನಡೆಸುತ್ತಿರುವ ಮಹಿಳೆಯ ಹಟ್ಟಿಗೆ ಗುಡ್ಡ ಜರಿದು ಹಟ್ಟಿ ಸಂಪುರ್ಣ ಜಖಂ ಗೊಂಡ ಘಟನೆ ಶನಿವಾರ ನಡೆದಿದೆ. ಎಂದಿನಂತೆ ನಿನ್ನೆ ಶನಿವಾರ ಮೇಯಲು ಬಿಟ್ಟ ಹಸುಗಳು ಬಂದು ತನ್ನ ಹಟ್ಟಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವೇಳೆಯಲ್ಲಿ ಗುಡ್ಡ ಜರಿದು ಹಟ್ಟಿಗೆ ಅಪ್ಪಳಿಸಿದ ಪರಿಣಾಮಸಂಪೂರ್ಣ ಜಖಂಗೊಂಡಿದೆ. ಮನೆಯ ಅಂಗಳದ ಹಟ್ಟಿಯಲ್ಲಿ ಇದ್ದ ಏಳೆಂಟು ದನಗಳು ಪವಾಡವೆಂಬಂತೆ ಅಲ್ಪಸ್ವಲ್ಪ ಗಾಯಗಳಾಗಿ ಪ್ರಾಣಾಪಯದಿಂದ ಪಾರಾಗಿದೆ.

ಹೈನುಗಾರಿಕೆ ಮಾಡುತ್ತಿರುವ ಮಹಿಳೆ ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಸರೋಜಿನಿ ಎಂಬವರು ಸುಮಾರು ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡು ಬಂದಿರುತ್ತಾರೆ.

ನಾನ್ಕೈದು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ರಬಸದಿಂದ ಬರುವ ನೀರು ಗುಡ್ಡ ಕೊರೆದು ಮನೆಯಂಗಳದಲ್ಲಿರುವ ದನದ ಹಟ್ಟಿಗೆ ಬಂದು ಅಪ್ಪಳಿಸಿದೆ. ಮನೆಗೂ ಬೀಳುವ ಸಂಭವವಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸಂಜೆ 6 ಗಂಟೆಯ ಸಮಯದಲ್ಲಿ ಗುಡ್ಡ ಜರಿಯುತ್ತಿರುವ ವಿಷಯವನ್ನು ಜಗನಾಥ್ ಅವರು ಗ್ರಾಮ ಪಂಚಾಯತ್ನ ಗಮನಕ್ಕೆ ತಂದಿದ್ದರು.
ಘಟನೆ ನಡೆದ ಕೂಡಲೇ ಕರಿಯಂಗಳ ಗ್ರಾಮ ಪಂಚಾಯತ್ ಪಿ ಡಿ ಒ ವಸಂತಿ , ಅಧ್ಯಕ್ಷೆ ರಾಧ ಲೋಕೇಶ್, ಉಪಾಧ್ಯಕ್ಷ ರಾಜು ಕೊಟ್ಯಾನ್‌, ಲಕ್ಷ್ಮೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ ಬಂದು ಪರಿಶೀಲನೆ ನಡೆಸಿದ್ದಾರೆ.

ಕೆ.ಎಂ.ಎಫ್‌ ಒಕ್ಕೂಟದ ನಿರ್ದೇಶಕ ಜಗದೀಶ್‌ ಪುಂಚಮೇ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿದೇಶಕರು ಸ್ಥಳಕ್ಕೆ ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *