ಬಾಳ್ತಿಲ,ವಿಟ್ಲಮುಡ್ನೂರು ಗ್ರಾ. ಪಂ.ಗೆ ಉಪ ಚುನಾವಣೆ:ಬಿಜೆಪಿ,ಕಾಂಗ್ರೆಸ್ ಬೆಂಬಲಿತರ ಜಯ
ಬಂಟ್ವಾಳ: ಬಾಳ್ತಿಲ ಮತ್ತು ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ನ ತಲಾ ಒಂದೊಂದು ಸ್ಥಾನಕ್ಕೆ ಭಾಮುವಾರ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು,ಬಾಳ್ತಿಲ ಗ್ರಾ.ಪಂ.ಗೆ ಬಿಜೆಪಿ ಬೆಂಬಲಿತ ನಿತಿನ್ ಕುಮಾರ್ ಹಾಗೂ ವಿಟ್ಲಮುಡ್ನೂರು ಗ್ರಾ.ಪಂ.ಗೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಎಲ್ಯಣ್ಣಪೂಜಾರಿ ಅವರು ಜಯಗಳಿಸಿದ್ದಾರೆ.

ಬಾಳ್ತಿಲ ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಅಣ್ಣಿಪೂಜಾರಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ
ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿತಿನ್ ಕುಮಾರ್ ಗೆಲುವು ಸಾಧಿಸುವ ಮೂಲಕ ಆ ಸ್ಥಾನವನ್ನು ಉಳಿಸಿಕೊಂಡಿದೆ.
ಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ 16 ಸ್ಥಾನಗಳು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿರುವುದು ವಿಶೇಷವಾಗಿದೆ.
ನೂತನವಾಗಿ ಆಯ್ಕೆಯಾದ ಸದಸ್ಯ ನಿತಿನ್ ಕುಮಾರ್ ಅವರನ್ನು ಶಾಸಕ ರಾಜೇಶ್ ನಾಯ್ಕ್ ,ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪಕೋಟ್ಯಾನ್ ಅಭಿನಂದಿಸಿದ್ದಾರೆ.
ಮುಂದಿನ ಆರು ತಿಂಗಳ ಅವಧಿಗೆ ಈ ಸದಸ್ಯ ಸ್ಥಾನ ಇರಲಿದ್ದು,ಬಳಿಕ ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಅದೇರೀತಿ ವಿಟ್ಲಮುಡ್ನೂರು ಗ್ರಾ.ಪಂ.ನಲ್ಲು ಸದಸ್ಯರೋರ್ವರ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು,ಇಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಎಲ್ಯಣ್ಣಪೂಜಾರಿ ಗೆಲ್ಲುವ ಮೂಲಕ ಈ ಸ್ಥಾನವನ್ನುಉಳಿಸಿಕೊಂಡಿದೆ



