ಮಿತ್ತಮಜಲು ಕ್ಷೇತ್ರದಲ್ಲಿ ಕೆರೆನೇಮ,ಉಡುಕುಬಲಿ”
ಬಂಟ್ವಾಳ: ಸಜಿಪಮಾಗಣೆಯ ಮಿತ್ತ ಮಜಲು ಕ್ಷೇತ್ರದಲ್ಲಿ ಬಿಸು ಜಾತ್ರೆಯ ಪ್ರಯುಕ್ತ” ಕೆರೆ ನೇಮ,ಉಡುಕು ಬಲಿ”ಉತ್ಸವವು ವಿಜೃಂಭಣೆಯಿಂದ ಜರುಗಿತು.

ಸಜೀಪಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ,ಕಾಂತಡಿಗುತ್ತು ಗಡಿಪ್ರದಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜನ್ದಾರ್ ಗುತ್ತು ಶಿವರಾಮ ಭಂಡಾರಿ ಸಜೀಪಗುತ್ತು,ನೂತನ ಗಡಿಪ್ರಧಾನರಾದ ಕಾಳಪ್ಪ ಶೆಟ್ಟಿ ಯಾನೆ ಮುತ್ತಣ್ಣ ಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನ ರಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರಿ ಗುತ್ತು ಜಯರಾಮ ಶೆಟ್ಟಿ,ವಿವೇಕ ಶೆಟ್ಟಿ ನಗ್ರಿಗುತ್ತು,ಜೀವನ್ ಆಳ್ವ,ಎಸ್. ಶ್ರೀಕಾಂತ್ ಶೆಟ್ಟಿ ,ಹರೀಶ್ ರೈ,ದೇವಿಪ್ರಸಾದ್ ಪೂಂಜಾ, ಶಿವಪ್ರಸಾದ್ ಶೆಟ್ಟಿ,ಕೆ.ರತ್ನಾಕರ ಪೂಜಾರಿ ನಾಡರ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ ರಮನಾಥ ರೈ ಸಹಿತ ಹಲವಾರು ಗಣ್ಯರು ಸಿರಿಮಡಿಗಂಧ ಪ್ರಸಾದ ಸ್ವೀಕರಿಸಿದರು