ನರಿಕೊಂಬು ನಿವಾಸಿ ದಕ್ಷಿಣ ಅಫ್ರಿಕಾದಲ್ಲಿ ಮೃತ್ಯು
ಬಂಟ್ವಾಳ: ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದ ಯುವಕನೋರ್ವ ದಕ್ಷಿಣ ಆಫ್ರಿಕಾದಲ್ಲಿ ಏ.05 ರಂದು ಅಕಾಲಿಕವಾಗಿ ಸಾವನ್ನಪ್ಪಿದ್ದು, ಮಂಗಳವಾರ ಮೃತದೇಹವನ್ನು ಬಂಟ್ವಾಳ ತಾಲೂಕಿನ ಸ್ವಗ್ರಾಮಕ್ಕೆ ತರಲಾಗಿದೆ.ನರಿಕೊಂಬು ಗ್ರಾಮದ ರವಿ ಸಪಲ್ಯರ ಪುತ್ರ ಮೃತ ರಜತ್( 25) ಮೃತಪಟ್ಟವರಾಗಿದ್ದಾರೆ.

ಉದ್ಯೋಗಕ್ಕಾಗಿ ದಕ್ಷಿಣ ಅಪ್ರಿಕಾಕಕ್ಕೆ ಸ್ನೇಹಿತರ ಜೊತೆ ತೆರಳಿದ್ದು,ಸೋಮವಾರ ಕೆಲಸಕ್ಕೆ ಸೇರ್ಪಡೆಯಾಗಬೇಕಾಗಿತ್ತು.ಆದರೆ ಎರಡು ದಿನಗಳ ಮೊದಲೇ ಆಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಮೃತರು ತಂದೆ, ತಾಯಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ರಜತ್ ಪಾರ್ಥಿವ ಶರೀರವನ್ನು ಊರಿಗೆ ತರಲು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಹಾಗೂ ಪ್ರಮುಖರಾದ ಪುರುಷೋತ್ತಮ ಸಾಲಿಯಾನ್ , ದಿನೇಶ್ ಅಮ್ಟೂರ್, ಉದಯ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅಂತರ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳು ನಿರಂತರ ಸಂಪರ್ಕಿಸಿ ಸಹಕರಿಸಿದ್ದರು.ನರಿಕೊಂಬು ಗ್ರಾಮದ ನಾಯಿಲ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಮೃತರ ಅಂತ್ಯಸಂಸ್ಕಾರ ಮಾಡಲಾಯಿತು.
ಮರಿಕೊಂಬು ಗ್ರಾಮ ಬಿಜೆಪಿ ಸಮಿತಿ ತೀವ್ರ ಶೋಕ ವ್ಯಕ್ತಪಡಿಸಿದೆ.