ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಗೆ ಸನ್ಮಾನ
ಬಂಟ್ವಾಳ: ತಾಲೂಕಿನ ಕೊಳಲಬಾಕಿಮಾರು ದ.ಕ.ಜಿ.ಪಂ. ಕಿ. ಪಾ. ಶಾಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 600 ರಲ್ಲಿ 572 ಅಂಕಗಳನ್ನು ಪಡೆದು ಸಾಧನೆಗೈದ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಕು. ಲತಾಳನ್ನು ಸನ್ಮಾನಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಮಲಾ,ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀಂದ್ರ ಶೆಟ್ಟಿ,ಮುಖ್ಯ ಶಿಕ್ಷಕರಾದ ಸುನಿಲ್ ಸಿಕ್ವೆರಾ, ಶಿಕ್ಷಕರಾದ ನಿಕಿತ, ಲೋಕೇಶ್ ಮೂಲ್ಯ, ಯೋಗಿನಿ ಉಪಸ್ಥಿತರಿದ್ದರು.