ಏ. 17 ರಂದು ಪುಂಜಾಲಕಟ್ಟೆಯಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ
ಬಂಟ್ವಾಳ: ಪುಂಜಾಲಕಟ್ಟೆ ಸೌಹಾರ್ಧ ಫ್ರೆಂಡ್ಸ್ ವತಿಯಿಂದ ದ.ಕ.ಜಿಲ್ಲಾ ಕಬಡ್ಡಿ ಎಸೋಸಿಯೇಶನ್ ಸಹಕಾರದಲ್ಲಿ ಸಾಮಾಜಿಕ ಸೇವಾಕರ್ತ ದಿ.ಸಿಲ್ವೆಸ್ಟರ್ ಪಿಂಟೋ ನಯನಾಡು ಅವರ ಸ್ಮರಣಾರ್ಥ 55 ಕೆ.ಜಿ. ಮತ್ತು ಗ್ರಾಮ ಸೀಮಿತ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎ.17ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅದ್ಯಕ್ಷ ಸುಧಾಕರ ಶೆಣೈ ಖಂಡಿಗ ಅವರು ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದು,ಹಲವಾರು ಗಣ್ಯರು,ಉದ್ಯಮಿಗಳು,ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
50 ರಿಂದ 60 ತಂಡಗಳು ಈಗಾಗಲೇ ನೊಂದಾವಣೆ ಮಾಡಿದೆ. ಜೊತೆಗೆ ಗ್ರಾಮ ಸೀಮಿತ ಸ್ಥಳೀಯ ತಂಡಗಳಿಗೆ ಮುಕ್ತ ಪಂದ್ಯಾಟವನ್ನು ಏರ್ಪಡಿಸಲಾಗಿದೆ.ಕಬಡ್ಡಿ ಪಂದ್ಯಾಟವನ್ನು ವೀಕ್ಷಿಸಲು ಪ್ರತ್ಯೇಕವಾದ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ ವಿಶೇಷವಾಗಿ ಮಹಿಳೆಯರಿಗೆ ರಾತ್ರಿ ಹೊತ್ತು ಮನೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ.ಇದೇ ವೇಳೆ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.
ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪ್ರಮುಖರಾದ ಮಹಮ್ಮದ್ ನಂದಾವರ, ಇಲ್ಯಾಸ್ ಬಸವನಗುಡಿ, ನೆಲ್ವಿಸ್ಟರ್ ಗ್ಲ್ಯಾನ್ ಪಿಂಟೋ ಉಪಸ್ಥಿತರಿದ್ದರು.