ಚಿಂತೆಯ ಬದಲು ಧನಾತ್ಮಕ ಚಿಂತನೆ ಅಗತ್ಯ: ಕಯ್ಯೂರು ನಾರಾಯಣ ಭಟ್
ಬಂಟ್ವಾಳ:ಹಿರಿಯರ ಸೇವಾ ಪ್ರತಿಷ್ಠಾನವು ಸೇವಾ ಚಟುವಟಿಕೆಗಳೊಂದಿಗೆ ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ಸದಾ ಸಿದ್ದವಿದೆ. ಪ್ರತಿಷ್ಠಾನದ ಸ್ಥಳೀಯ ಸಭೆಗಳಲ್ಲಿ ಭಾಗವಹಿಸಿ ಹಿರಿಯರು ಧನಾತ್ಮಕ ಚಿಂತನೆಯನ್ನು ಮೈ ಗೂಡಿಸಿಕೊಳ್ಳಬೇಕೆಂದು ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಹೇಳಿದರು.

ಪುತ್ತೂರು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ.ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರೊ ವಿ. ಬಿ ಆರ್ತಿಕಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿನೀಡಿದರು.
ಪ್ರತಿಷ್ಠಾನದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಬಂಟ್ವಾಳ ಘಟಕದ ಕೃಷ್ಣಶರ್ಮ ಅನಾರು ಚಟುವಟಿಕೆಗಳ ಮಾಹಿತಿ ನೀಡಿದರು.
ಗುಂಡ್ಯಡ್ಕ ಈಶ್ವರ ಭಟ್, ಸೀತಾರಾಮ ಸಾಲೆತ್ತೂರು, ಭವಾನಿ ಶಂಕರ ಶೆಟ್ಟಿ ಪುತ್ತೂರು, ಪದ್ಮನಾಭ ನಾಯಕ್, ಚಂಚಲಾಕ್ಷಿ, ಸ್ವರ್ಣಲತಾ ಭಾಸ್ಕರ್,ಗೀತಾ ಕೆ ಭಟ್, ಕುಸುಮ ಎಸ್ ಭಟ್, ಕೃಷ್ಣ ಭಟ್ ಚೇಕೊಡು, ಡಾ. ಆದಿತ್ಯ ತಂತ್ರಿ, ರಂಗನಾಥರಾವ್ ಬೊಳುವಾರು ಉಪಸ್ಥಿತರಿದ್ದರು.
ಕೃಷ್ಣವೇಣಿ ಎಸ್ ಭಟ್ ಪ್ರಾರ್ಥಿಸಿದರು. ಕೇಂದ್ರ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣಶರ್ಮ ವಂದಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.