ಮಂಗಳೂರು-ಉಡುಪಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ, ಬಿಸಿಗಾಳಿಯ ಭೀತಿ

ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ ಹೆಚ್ಚಾಗಿದ್ದು, ಯಲ್ಲೋ ಅಲರ್ಟ್ ನೀಡಿದೆ ಭಾರತೀಯ ಹವಾಮಾನ ಇಲಾಖೆ. ತಾಪಮಾನದಲ್ಲಿ ಗಣನೀಯ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಫೆಬ್ರವರಿ 26 ಮತ್ತು 27 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ. ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಕಳೆದ ಕೆಲವು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದೆ.
ಮುಂಜಾನೆ ಮಂಜಿನಿಂದ ಕೂಡಿರುತ್ತದೆ, ನಂತರ ಮೋಡ ಕವಿದ ಆಕಾಶ ಇರುತ್ತದೆ, ಆದರೆ ಮಧ್ಯಾಹ್ನವು ತೀವ್ರವಾದ ಸೂರ್ಯನ ಬೆಳಕಿನಿಂದ ಸುಡುತ್ತದೆ. ಹೀಟ್‌ವೇವ್ ಎಚ್ಚರಿಕೆಯು ಶಾಖದ ತೀವ್ರತೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೂಚಿಸುತ್ತದೆ.ಹವಮಾನ ಇಲಾಖೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದ್ದು, ಇಂದು ಮತ್ತು ನಾಳೆ ಬಿಸಿ ಮತ್ತು ಆರ್ದ್ರ ವಾತಾವರಣದ ಎಚ್ಚರಿಕೆಯನ್ನು ನೀಡಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಒತ್ತಾಯಿಸಿದ್ದಾರೆ.