ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಭಜನೋತ್ಸವ ಏಕದಶರುಧ್ರಾಭಿಷೇಕ
ಬಂಟ್ವಾಳ:ತಾಲೂಕಿನ ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.೨೬ರಂದು ಬುಧವಾರ ಭಜನಾ ಸಂಕೀರ್ತನೆ ಮತ್ತು ಏಕದಶರುಧ್ರಾಭಿಷೇಕ ವಿಶೇಷ ರುಧ್ರಹೋಮ ನಡೆಯಲಿದೆ.೨೬ರಂದು ಬೆಳಗ್ಗೆ ೬.೩೦ರಿಂದ ಭಜನಾ ಸಂಕೀರ್ತನೆ ದೀಪಪ್ರಜ್ವಲನೆಯೊಂದಿಗೆ ಪ್ರಾರಂಭಗೊಂಡು ಸೂರ್ಯಹಸತದವರೇಗೆ ನಡೆಯಲಿದ್ದು ನಂತರ ಮಂಗಳೋತ್ಸವ ನಡೆಯಲಿದೆ.

ಬೆಳಗ್ಗೆ ೯ ಗಂಟೆಗೆ ಶ್ರೀ ಕಾವೇಶ್ವರ ದೇವರಿಗೆ ಏಕದಶರುದ್ರಾಭಿಷೇಕ ವಿಶೇಷ ರುಧ್ರಹೋಮ ನಡೆಯಲಿದೆ.ರಾತ್ರಿ ೭ ಗಂಟೇಗೆ ರಂಗಪೂಜೆ, ಮಹಾಪೂಜೆ ಪ್ರಸಾದವಿತರಣೆ ನಡೆಯಲಿದೆ.ನಂತರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನಮಂಡಳಿ ಪಾವಂಜೆ ಇವರಿಂಧ ರಾವಣೋದ್ಭವ-ಭೂಕೈಲಾಸ-ಪಾಂಚಜನ್ಯ ಕಾಲಮಿತಿ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.