ಬಂಟ್ವಾಳ: ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ಕಾರು (Car) ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ ಸಾವನ್ನಪ್ಪಿದ್ದಾರೆ. ವಾಮದಪದವು ನಿವಾಸಿ ಸುಮತಿ (91) ಮೃತ ವೃದ್ಧೆ. ಅಪಘಾತದ ಭೀಕರ ದೃಶ್ಯ ಅಂಗಡಿ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶೋಭಾ ಎಂಬವರು ಕಾರು ಚಲಾಯಿಸುತ್ತಿದ್ದರು. ಕಾರು ಚಾಲಕಿಯ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಕಾರು ಮೊದಲಿಗೆ ಅಂಗಡಿ ಬಳಿ ಇದ್ದ ಗ್ರಾಹಕ ಲೂಯಿಸ್ ಡಿಕೋಸ್ತಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ, ಅಂಗಡಿ ಮುಂದೆ ಕೂತಿದ್ದ ವೃದ್ಧೆ ಸುಮತಿಯವರಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೆ ಮಂಗಳೂರು ಹೊರವಲಯದ ಖಾಸಗಿ ‌ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಮತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *