ಮಣ್ಣು, ನೀರಿನ ಸಂರಕ್ಷಣೆ ಅತೀ ಅವಶ್ಯಕ: ಜಲಾನಯನ ಯಾತ್ರೆ” ಉದ್ಘಾಟಿಸಿ ಡಾ.ಎನ್ ಕೆ.ರಾಜೇಶ್ ಕುಮಾರ್
ಬಂಟ್ವಾಳ: ಪ್ರಸಕ್ತ ದಿನಗಳಲ್ಲಿ ಮಣ್ಣು, ನೀರಿನ ಸಂರಕ್ಷಣೆ ಅತೀ ಅವಶ್ಯಕವಾಗಿದೆ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು, ಜಲಾನಯನ ಯಾತ್ರೆಯು ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರು ಕೊಯ್ಲು ಮತ್ತು ಪುನರ್ ಭರ್ತಿ ಚಟುವಟಿಕೆಯಂತಹ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಕೇಂದ್ರದ ಭೂಸಂಪನ್ಮೂಲ ಇಲಾಖೆಯ ರಿರ್ವಾಡ್ ಎಕ್ಷಪರ್ಟ್ ಡಾ.ಎನ್ ಕೆ.ರಾಜೇಶ್ ಕುಮಾರ್ ಹೇಳಿದ್ದಾರೆ.

ಕೇಂದ್ರದ ಭೂಸಂಪನ್ಮೂಲ ಗ್ರಾಮೀಣ ಮಂತ್ರಾಲಯ,ಬಂಟ್ವಾಳ ಕೃಷಿ ಇಲಾಖೆ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ “ಜಲಾನಯನ ಯಾತ್ರೆ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಇದೇ ವೇಳೆ ಆತ್ಮ ಯೋಜನೆ ಎಟಿಯಂ ಹನಮಂತ ಕಾಳಗಿ ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಸ್ಥಳೀಯರಾದ ಪ್ರಭಾಕರ ಶೆಟ್ಟಿಕೊಳಕೆ, ಪದ್ಮನಾಭ ಕುಂದರ್ ಕಂದೂರು, ಸಜೀಪ ಮೂಡ ಗ್ರಾ.ಪಂ.ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷೆ ಫೌಝೀಯ, ಪಂಚಾಯತಿ ಸಿಬ್ಬಂದಿ ಲಕ್ಷ್ಮೀಶ, ಕೃಷಿಸಖಿ ವಿನೋದ, ಕೃಷಿಕರಾದ ಪಾರ್ವತಿ, ಆನಂದ ಪೂಜಾರಿ, ಪುರುಷೋತ್ತಮ ಪೂಜಾರಿ, ಜಿಲಾನಯನ ಸಹಾಯಕರಾದ ವಿನೀತ್ ಜಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ ಮಾಯಾ ಕುಮಾರಿ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಅದೇ ರೀತಿ ಜಲಾನಯನ ಯಾತ್ರೆ ವಾಹನದಲ್ಲಿ ಜಲಾನಯನ ಚಟುವಟಿಕೆಗಳ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.ಮಾರ್ನಬೈಲ್ ದ್ವಾರದಿಂದ ಸಜಿಪಮೂಡ ಪಂಚಾಯತ್ ರವರೆಗೆ ಜಲಾನಯನ ಜಾಥಾ ಸಾಗಿ ಬಂತು.ಇದಕ್ಕು ಮುನ್ನ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಪಂಚಾಯತ್ ಮುಂಭಾಗದಲ್ಲಿ ಗಿಡ ನಾಟಿಗೈದು ಮೂಲಕ ವನಮಹೋತ್ಸವ ಆಚರಿಸಲಾಯಿತು.
ಕಂದೂರಿನ ಪದ್ಮನಾಭ ಕುಂದರ್ ರವರ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕಿಂಡಿಅಣೆಕಟ್ಟುವಿನಲ್ಲಿ ಬಾಗಿನ ಅರ್ಪಿಸಲಾಯಿತು.ಜಲ ಉಜ್ಜಲ ಎಂಬ ಮಣ್ಣು ಮತ್ತು ನೀರು ಸಂರಕ್ಷಣೆಯ ಯಕ್ಷಗಾನ ಪ್ರದರ್ಶಿಸಲಾಯಿತು.
ಸಜೀಪ ಮೂಡ ಗ್ರಾ.ಪಂ.ಅಧ್ಯಕ್ಷೆ ಶೋಭಾ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಜೋ ಪ್ರದೀಪ್ ಡಿಸೋಜ, ದ.ಕ ಜಿಲ್ಲೆ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದ, ಸಜಿಪಮೂನ್ನೂರು ಗ್ರಾ.ಪಂ.ಅಧ್ಯಕ್ಷೆ
ಅನಿತಾ, ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಪದ್ಮರಾಜ ಬಲ್ಲಾಳ್ ಮಾವಂತೂರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ,ಗ್ರಾ.ಪಂ.ಸದಸ್ಯರಾದ ವಿಶ್ವನಾಥ ಬೆಳ್ಳಡ, ಯೋಗೀಶ್ ಬೆಳ್ಳಡ, ಹಮೀದ್, ಸಿದ್ದೀಕ್, ಅಬ್ದುಲ್ ಕರೀಂ, ಸೋಮನಾಥ, ಸೀತಾರಾಮ, ವಿಜಯ, ಅರುಂದತಿ, ಮಹಾದೇವಿ, ಪ್ರಮೀಳಾ, ಪಂಚಾಯತ್ ಕಾರ್ಯದರ್ಶಿ ಸುಜಾತ ,ಸುಭಾಷ್ ನಗರದ ಹಾ.ಉ. ಸಂಘದ ಕಾರ್ಯದರ್ಶಿ ರಮೇಶ್
ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ ಆರ್ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೋವಿಂದೇ ಗೌಡ ರವರು ಪ್ರಸ್ತಾವನೆಗೈದರು.ಬಂಟ್ವಾಳ ಕೃಷಿ ಅಧಿಕಾರಿನಂದನ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.ವಿವಿಧ ಇಲಾಖಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕೃಷಿ ಸಖಿಯರು ಭಾಗವಹಿಸಿದ್ದರು