ಶ್ರೀ ಕ್ಷೇ. ಧ.ಗ್ರಾ. ಯೋಜನೆಯ ಕ್ರಿಟಿಕಲ್ ನಿಧಿಯಿಂದ ಸಹಾಯಧನ ವಿತರಣೆ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ತುಂಬೆ ಬೋಲ್ಲಾರಿ ನಿವಾಸಿ ಅವ್ವಮ್ಮ ಇವರ ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಶ್ರೀ ಕ್ಷೇ. ಧ. ಗ್ರಾ.ಯೋ.ಯ ಕ್ರಿಟಿಕಲ್ ನಿಧಿಯಿಂದ ಮಂಜೂರಾದ 20 ಸಾ.ರೂ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ಕಚೇರಿಯ ಸ್ವ ಸಹಾಯ ಸಂಘಗಳ ಆಂತರಿಕ ಲೆಕ್ಕ ಪರಿಶೋಧನೆ ವಿಭಾಗದ ಯೋಜನಾಧಿಕಾರಿ ರೂಪಾ ಜೈನ್ ಅವರು ಸಹಾಯಧನದ ಚೆಕ್ ನ್ನು ಅವ್ವಮ್ಮ ಅವರಿಗೆ ವಿತರಿಸಿದರು. ಈ ಸಂದರ್ಭ ಬಂಟ್ವಾಳ ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ರಾಜೇಶ್, ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಸುಜೀರ್ ವಿಭಾಗದ ಸೇವಾ ಪ್ರತಿನಿಧಿ ಮಲ್ಲಿಕಾ ,ಒಕ್ಕೂಟದ ಪದಾಧಿಕಾರಿಯಾದ ನೌಜಿಯ, ನಿಸರ್ಗ ಸಂಘದ ಸದಸ್ಯರಾದ ಬಿಫಾತಿಮಾ ಹಾಗೂ ಮೈಮುನ ಉಪಸ್ಥಿತರಿದ್ದರು.