ಕಾವೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ: ನ್ಯಾಶನಲ್ ಮೆಡಿಕೋಸ್ ಆರ್ಗನೈಜೇಷನ್ ಮತ್ತು ಸಾಮರಸ್ಯ ಗತಿವಿಧಿ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನ,ಶಿವಾಜಿ ಗೆಳೆಯರ ಬಳಗ ರಿ.ಕೊಪ್ಪಳ, ತತ್ವಮಸಿ ಫ್ರೆಂಡ್ಸ್ ಧನೂ ಪೂಜೆ,ವಿಶ್ವ ಹಿಂದೂ ಪರಿಷತ್, ಬಜರಂಗದಳವೀರ ಕೇಸರಿ ಘಟಕ ಬೆಳ್ಳೂರು,
ಶೌರ್ಯ ವಿಪತ್ತು ನಿರ್ವಹಣಾ ಘಟಕ ಧನೂಪೂಜೆ ಇವುಗಳ ಸಹಯೋಗದಲ್ಲಿ ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾವೇಶ್ವರ ದೇವಸ್ಥಾನ ಸಮಿತಿಯ ಸವಿತಾ ಶೆಟ್ಟಿ ಮತ್ತು ಜಯರಾಂ ಶೆಟ್ಟಿ ದಾಸಕೋಡಿ ಅವರು ಶಿಬಿರವನ್ನುಉದ್ಘಾಟಿಸಿದರು.ಶಿವಾಜಿ ಗೆಳೆಯರ ಬಳಗದ ಗೌರವಾಧ್ಯಕ್ಷ ರಾದ ಉಮಾನಾಥ ಕೊಪ್ಪಳ,, ಅಧ್ಯಕ್ಷರಾದ ಗಣೇಶ ಸಾಣಕಟ್ಟ ,ವಕೀಲರಾದ ತೀರ್ಥ ಸೀತಾರಾಮ ಕಮ್ಮಾಜೆ, ರಾಷ್ಟೀಯ ಸ್ವಯಂಸೇವಾ ಸಂಘದ ಉದ್ಯೋಗಿ ಕಾರ್ಯಪ್ರಮುಖ್ ಸುರೇಶ್ ಕಡೆಗೋಳಿ ,ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರಕೇಸರಿ ಘಟಕದ ಸುಮಿತ್ ಧನೂಪೂಜೆ , ಶೌರ್ಯ ವಿಪತ್ತು ನಿರ್ವಹಣಾ ಘಟಕ ಧನೂಪೂಜೆ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಮತ್ತು ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಸದಸ್ಯರು, ಘಟಕದ ಸದಸ್ಯರು,ಪ್ರತಿನಿಧಿ ಗಳು, ಸಂಪನ್ಮೂಲ ವ್ಯಕ್ತಿ ಗಳು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ 65 ಮಂದಿ ದಂತ ಚಿಕಿತ್ಸಾ ಸೌಲಭ್ಯ ಹಾಗೂ 72 ಸದಸ್ಯರು ಇತರೆ ಚಿಕಿತ್ಸಾ ಸವಬಲಭ್ಯದ ಪ್ರಯೋಜನ ಪಡೆದರು.