ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಇಂದು ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ. 10 ಕೋಟಿಯಷ್ಟು ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ ಹಣ ಜಮೆ ಆಗಲಿದೆ. ವಿಶ್ವದಲ್ಲೇ ಅತಿದೊಡ್ಡ ಡಿಬಿಟಿ ಸ್ಕೀಮ್ ಆದ ಇದರಲ್ಲಿ ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಇಂದು ಅದರ ಒಂದು ಕಂತಿನ ಹಣ ಬಿಡುಗಡೆ ಆಗುತ್ತಿದೆ. 2018-19ರಿಂದ ಆರಂಭವಾಗಿ ಇಲ್ಲಿಯವರೆಗೆ 8-11 ಕೋಟಿ ರೈತರು 18 ಕಂತುಗಳ ಹಣ ಪಡೆದಿದ್ದಾರೆ. ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಿ ಸರ್ಕಾರ ಈ ಯೋಜನೆ ಮೂಲಕ ವರ್ಷಕ್ಕೆ 6,000 ರೂ ಸಹಾಯಧನ ನೀಡುತ್ತದೆ. ಈ ಆರು ಸಾವಿರ ರೂ ಅನ್ನು ತಲಾ 2,000 ರೂಗಳ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ.
ಕೃಷಿ ಜಮೀನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರು. ವೈದ್ಯ, ವಕೀಲ, ಎಂಜಿನಿಯರ್, ಸಿಎ ಇತ್ಯಾದಿ ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಜನಪ್ರತಿನಿಧಿಗಳು, ಆದಾಯ ತೆರಿಗೆ ಪಾವತಿದಾರರು ಕೃಷಿ ಜಮೀನು ಹೊಂದಿದ್ದರೂ ಕೂಡ ಯೋಜನೆಗೆ ಅರ್ಹರಾಗಿರುವುದಿಲ್ಲ. ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆಂದು ಈ ಸ್ಕೀಮ್ ನಡೆಸಲಾಗುತ್ತಿದೆ.