ಪೊಳಲಿ: ಮಾ.1ರಿಂದ ಮಾ.7ರವರೆಗೆ ಪೋಳಲಿಯಲ್ಲಿ ಶತಚಂಡಿಕಾಯಾಗ, ಇಂದು ಸಂಜೆ ಭಕ್ತಾದಿಗಳ ಸಭೆ

ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೋಳಲಿಯಲ್ಲಿ ಶತಚಂಡಿಕಾಯಾಗ ಹಾಗೂ ಸೇವಾರೂಪದಲ್ಲಿ ದೊಡ್ಡರಂಗಪೂಜೆ ಉತ್ಸವ ನಡೆಯಲಿದೆ. ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ದಿನಾಂಕ 01-03-2025 ರಿಂದ 07-03-2025 ರವರೆಗೆ ದೊಡ್ಡರಂಗಪೂಜೆ ಉತ್ಸವದ ಪೂರ್ವ ಸಿದ್ಧತೆ ಬಗ್ಗೆ ಭಕ್ತಾದಿಗಳ ಸಭೆಯನ್ನು ಇಂದು (14-02-2025) ಶುಕ್ರವಾರ ದಂದು ಸಂಜೆ 05.00 ಗಂಟೆ ಗೆ ಸರಿಯಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಕರೆಯಲಾಗಿದೆ .
ಪೊಳಲಿಗೆ ಸಂಭಂಧಪಟ್ಟ ಗ್ರಾಮಗಳಾದ ಬಡಗ ಉಳಿಪ್ಪಾಡಿ,ತೆಂಕ ಉಳಿಪ್ಪಾಡಿ,ಅಮ್ಮುಂಜೆ,ಕರಿಯಂಗಳ, ಮುತ್ತೂರು, ಳವೂರು,ಅಡ್ಡೂರು,ಮಲ್ಲೂರು,ಪೆರ್ಮಂಕಿ,ಮೇರಮಜಲು,ಕೊಡ್ಮಾಣ್,ಅಬ್ಬೆಟ್ಟು,ನೆತ್ತರಕೆರೆ,ಪುದು,ಸುಜೆರ್,ಅರ್ಕುಳ ಗ್ರಾಮದ ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು , ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು , ಎಲ್ಲಾ ಗ್ರಾಮಸ್ಥರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಗೌರವಪೂರ್ವಕವಾಗಿ ಕೋರಲಾಗಿದೆ.