ರಾಜಕಾರಣಿಗಳಿಗೆ ಕಾಣದ ರಸ್ತೆ ಈ ವೃದ್ಧನಿಗೆ ಕಂಡಿದೆ, 50 ವರ್ಷಗಳಿಂದ ತನ್ನೂರಿನ ರಸ್ತೆಯನ್ನು ಏಕಾಂಗಿಯಾಗಿ ದುರಸ್ತಿ ಮಾಡಿದ ಅಪ್ಪಿಯಣ್ಣ

ಉಡುಪಿ ಜಿಲ್ಲೆಯ ಕಾರ್ಕಳದ ಅಜೆಕಾರಿನ ಮರ್ಣೆ ಗ್ರಾಮದ ಮರ್ಣೆ ಗ್ರಾಮದ ಅಪ್ಪಿಯಣ್ಣ/ಶ್ರೀನಿವಾಸ ಮೂಲ್ಯ ಎಂಬುವವರು ದೊಂಬರಪಲ್ಕೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಇದನ್ನು ಪ್ರತಿದಿನ ಈ ವ್ಯಕ್ತಿ ದುರಸ್ಥಿತಿಗೊಳಿಸುತ್ತಾರೆ. ರಾಜಕಾರಣಿಗಳಿಗೆ ಈ ರಸ್ತೆ ಕಂಡಿಲ್ಲ. ಆದರೆ ಈ ವೃದ್ದ ವ್ಯಕ್ತಿಗೆ ಇದನ್ನು ದುರಸ್ಥಿತಿ ಮಾಡಬೇಕು ಎಂಬ ಮನಸ್ಸು ಬಂದಿದೆ. ಕಳೆದ 50 ವರ್ಷದಿಂದ ತನ್ನೂರಿನ ಮಣ್ಣಿನ ರಸ್ತೆಯನ್ನ ಏಕಾಂಗಿಯಾಗಿ ದುರಸ್ತಿ ಮಾಡುತ್ತಿದ್ದಾರೆ. ಹಾರೆ ಪಿಕ್ಕಾಸು ಹಿಡಿದು ಏಕಾಂಗಿಯಾಗಿ 1.5ಕಿಮಿ ಮಣ್ಣಿನ ರಸ್ತೆಯನ್ನು ದುರಸ್ತಿ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಸಂಚಾರ ಮಾಡಲು ಸಾಧ್ಯವಿಲ್ಲ ಅಷ್ಟು ಕೆಟ್ಟು ಹೋಗಿದೆ. ಹೀಗಾಗಿ ಇದನ್ನು ದುರಸ್ಥಿತಿ ಮಾಡಬೇಕು ಎಂಬ ಕಾರ್ಯಕ್ಕೆ ಶ್ರೀನಿವಾಸ ಮೂಲ್ಯ ಇಳಿದಿದ್ದಾರೆ. ಮಳೆ ನೀರು ಹರಿದು ಹೋಗುವುದರಿಂದ ರಸ್ತೆ ಹದಗೆಡುತ್ತೆ ಎಂದು ತಿಳಿದು ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ. ಮಣ್ಣಿನ ರಸ್ತೆಯನ್ನು ಸುಮಾರು 15 ಕುಟುಂಬಗಳು ಆಶ್ರಯಿಸಿವೆ.