ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ. )ಬಂಟ್ವಾಳ ಯೋಜನಾ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಭಿವೃಧ್ಧಿಗಾಗಿ ಸ್ವ-ಸಹಾಯ ಸಂಘಗಳ ಮುಖಾಂತರ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳ ಹಾಗೂ ಸಿಡ್ಬಿ ಸಾಲ ಪಡಕೊಂಡು ಸ್ವ- ಉದ್ಯೋಗ ಮಾಡಿಕೊಂಡಿರುವ ಸದಸ್ಯರ ಅಧ್ಯಯನಕ್ಕಾಗಿ ವರ್ಲ್ಡ್ ಬ್ಯಾಂಕ್ ನ ಅಮಿತ್ ಅರೋರ ಜಿ ,ಗೇಟ್ಸ್ ಫೌಂಡೇಶನ್ ನ ಅಂಜಿನಿ ಕುಮಾರ್ ಜಿ ಮತ್ತು ಸಾಧನ್ ನ ನೀರಜ್ ಪೋಕ್ರಿಯಲ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ್.ಹೆಚ್, ಕರಾವಳಿ ಪ್ರಾದೇಶಿಕ ವಿಬಾಗದ ಬಿ.ಸಿ. ಯೋಜನಾಧಿಕಾರಿ ಸುಪ್ರೀತ್ ಕುಮಾರ್ ಜೈನ್, ಸಂವಹಣಾ ಯೋಜನಾಧಿಕಾರಿ ಅಜಿತ್ ಹೆಗ್ಡೆ , ವಲಯ ಮೇಲ್ವಿಚಾರಕಿ ವೇದಾವತಿ, ಸೇವಾಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು.
ಗುಂಪಿನ ಹಾಗೂ ಸದಸ್ಯರ ದಾಖಲಾತಿಗಳ ನಿರ್ವಹಣೆ, ಸಂಘದ ಆರ್ಥಿಕ ವ್ಯವಹಾರ ಹಾಗೂ ಆರ್ಥಿಕ ವ್ಯವಹಾರದಲ್ಲಿನ ಬದ್ದತೆ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
