ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಹಬ್ಬ 2024-25
ಬಂಟ್ವಾಳ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಹಬ್ಬ ಕಾರ್ಯಕ್ರಮವು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಜರಗಿತು.
ಗ್ರಾಮದ ಹಿರಿಯರಾದ ರಾಮಚಂದ್ರ ಬನ್ನಿಂತಾಯರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮವಸ್ತ್ರದ ಶಿಸ್ತಿನಲ್ಲಿ ಮಕ್ಕಳು ಗೀತಾಪಠಣ ಮಾಡಿ ನಾಡದೇವಿ ಹಾಗೂ ಭಾರತಾಂಬೆಯ ಪ್ರಾರ್ಥನೆಗೈದು, ಕವಾಯತು ಪ್ರದರ್ಶನಗೈದರುಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅವರು ಮಕ್ಕಳೇ ರಚಿಸಿದ ‘ಪಲ್ಲಕ್ಕಿ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿದ್ಯಾ ಕುಮಾರಿ, ಶಿಕ್ಷಣ ಸಂಯೋಜಕರಾದ ಸುಜಾತ, ಸುಧಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರತ್ನ, ಕಲ್ಲಡ್ಕ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ. ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ, ಹರಿಣಾಕ್ಷಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಕುಲಾಲ್, ಉಪಾಧ್ಯಕ್ಷೆ ಭವ್ಯ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತ ಬಿ ಸ್ವಾಗತಿಸಿ, ಶಿಕ್ಷಕಿ ಇಂದಿರ ವಂದಿಸಿದರು ಶಾಲಾ ಶಿಕ್ಷಕರಾದ ಮಹಮ್ಮದ್ ಅಖೀಲ್, ಶಿಕ್ಷಕಿಯರಾದ ನಿಶ್ಮಿತಾ, ಅಶ್ವಿನಿ ಬಹುಮಾನ ಪಟ್ಟಿ ವಾಚಿಸಿದರು. ಶಾಲೆಯ ಹಿರಿಯ ಶಿಕ್ಷಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಸಂಜೆ ನೆಟ್ಲ ಹಾಗೂ ಬೊಮ್ಮನಕೋಡಿ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಮಕ್ಕಳ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನೆಟ್ಲ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರ ಸಮ್ಮಿಲನದೊಂದಿಗೆ ನೃತ್ಯ ನಾಟಕದ ಜುಗಲ್‌ಬಂದಿ ‘ಮಕ್ಕಳ ಸ್ವರ್ಗ’ ಎಂಬ ವಿಶೇಷ ಕಾರ್ಯಕ್ರಮವು ನಡೆಯಿತು.
ರಾತ್ರಿ ನಡೆದ ಸಭಾಕಾರ್ಯಕ್ರಮ ಸಂದರ್ಭದಲ್ಲಿ ಕಬಡ್ಡಿಯಲ್ಲಿ ರಾಷ್ಟಮಟ್ಟದಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಹಾಗೂ ಕಲಿಕೆಯಲ್ಲಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರವಿತ್ತ ದಾನಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾಕಾರಂಜಿಯಲ್ಲಿ ಮಿಂಚಿದ ವಿದ್ಯಾರ್ಥಿಗಳನ್ನು, ಶಾಲೆಯ ಸ್ಪರ್ಥೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನೂ, ಪೋಷಕರನ್ನೂ ಬಹುಮಾನವಿತ್ತು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ಅವರು ವಹಿಸಿದ್ದರು.ಇದೇ ವೇಳೆ ಈ ಶೈಕ್ಷಣಿಕ ವರ್ಷದಿಂದ ನೆಟ್ಲ ಶಾಲೆಯಲ್ಲಿ ಎಲ್.ಕೆ.ಜಿ. ಯು.ಕೆ.ಜಿ. ಆರಂಭಿಸಲಾಗುವುದನ್ನು ಘೋಷಿಸಲಾಯಿತು. ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಯತಿನ್ ಕುಮಾರ್ ಏಳ್ತಿಮಾರ್, ಹರಿಕೃಷ್ಣ ಬಿ.ಎಸ್ ಬರಿಮಾರು, ಹಿರಿಯ ವಿದ್ಯಾರ್ಥಿಗಳಾದ ಮಹಾಬಲ ಗೌಡ ಚನಿಲ, ವಲೇರಿಯನ್ ಅಲ್ಮೇಡಾ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ, ಸವಿತಾ, ದೀಪಕ್, ಅಭಿಷೇಕ್ ಎನ್, ಪುಷ್ಪಲತಾ ಶೇಖರ್ ಪೂಜಾರಿ ಬೆಂಗಳೂರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾಲತ ಬಿ ಸ್ವಾಗತಿಸಿದರು, ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ನಂತರ ನಾಟಕ ಪ್ರದರ್ಶನ ನಡೆಯಿತು.