ಫರಂಗಿಪೇಟೆ ಶ್ರೀ ರಾಮ ವಿದ್ಯಾ ಸಂಸ್ಥೆಯಲ್ಲಿ ಪೋಷಕರ ದಿನಾಚರಣೆ
ಬಂಟ್ವಾಳ: ಯಾವುದೇ ವ್ಯಕ್ತಿಗೆ ಅವರ ಪ್ರಾಥಮಿಕ ಶಿಕ್ಷಣ ಮತ್ತು ಶಾಲೆ ಜೀವನದಲ್ಲಿ ಮರೆಯದ,ಸವಿಯಾದ ನೆನಪು ,ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ ೧೦೮ ವರ್ಷದ ಈ ಶಾಲೆಯಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಪಡೆದಿರೋದು ನನ್ನ ಪುಣ್ಯ ಎಂದು ಶಾಲಾ ಆಡಳಿತ ಸಮಿತಿಯ ಹಿರಿಯ ಸದಸ್ಯರಾದ ಮಂಜುನಾಥ ಶೆಣೈ ಅವರು ಹೇಳಿದ್ದಾರೆ.

ಫರಂಗಿಪೇಟೆ ಶ್ರೀ ರಾಮ ವಿದ್ಯಾ ಸಂಸ್ಥೆ ಯಲ್ಲಿ ನಡೆದ ಪೋಷಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರುಮಾತನಾಡಿ,ತಮ್ಮ ಶಾಲಾದಿನಗಳನ್ನು ಮೆಲುಕು ಹಾಕಿದರು.ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಕಾರ್ಯದರ್ಶಿ ಎ.ಕೆ ಜಯರಾಮ ಶೇಕ , ಸಂಚಾಲಕರಾದ ಎ.ಗೋವಿಂದ ಶೆಣೈ , ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಕಲ್ಲತಡಮೆ ,ಅರ್ಕುಳ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಗಡಿಕಾರರಾದ ಅರ್ಕುಳ ಕಂಪ ಸದಾನಂದ ಆಳ್ವ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ , ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಜಯಕುಮಾರ್ ಶೆಟ್ಟಿ ಅರ್ಕುಳ ಬೀಡು ,ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಲೀಲ್ ,ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಬಾನು , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ ಶೆಟ್ಟಿ, ಮುಖ್ಯ ಶಿಕ್ಷಕ ರಾದ ಶೈಲಾ , ಜಯಕುಮಾರ್ ,ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಶಾಲಾ ಶಿಕ್ಷಕ ರಕ್ಷಕ ಸಂಘದ ದಿನಕರ ಕರ್ಕೇರ ಮಂಟಮೆ , ಯೋಗೇಶ್ ಆಚಾರ್ಯ , ಆಶಾ ಚಂದ್ರ , ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯಸ್ಥರಾದ ಕೆ.ಆರ್ ದೇವದಾಸ್ ರವರು ಸ್ವಾಗತಿಸಿದರು ದಿನಕರ ಕರ್ಕೇರ ವಂದಿಸಿದರು.
ಈ ಸಂದರ್ಭ ಪೋಷಕರಿಗೆ ಆಟೋಟ ಸ್ಪರ್ಧೆ , ವಿದ್ಯಾರ್ಥಿಗಳಿಗೆ ಸಾಹಿತ್ಯ ಸಮ್ಮೇಳನ , ಆಟೋಟ ಸ್ಪರ್ಧೆಗಳನ್ನು ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು