ಹೊಸ ಸಂವತ್ಸರದ ಆದಿ ಭಾಗದಲ್ಲಿ ಶ್ರೀ ಮಹಾಕಾಲೇಶ್ವರ ಮೂರ್ತಿ ಪ್ರತಿಷ್ಠೆ
ಜ. ೧೯-೨೦ರಂದು ಸಾಂಪ್ರದಾಯಿಕ ಚೌಕಟ್ಟಿನಲ್ಲಿ
ಗೋಳಿದಡಿಗುತ್ತಿನ ವರ್ಷದ `ಗುತ್ತುದ ಪರ್ಬೊ’
ಕೈಕಂಬ : ಹೊಸ ಸಂವತ್ಸರದ ಆದಿಭಾಗದಲ್ಲಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಬ್ರಹ್ಮಕಲಶ ಪ್ರತಿಷ್ಠಾ ಸಂಭ್ರಮ ನಡೆಯಲಿರುವುದರಿಂದ ಈ ವರ್ಷ ಜ. ೧೯ ಮತ್ತು ೨೦ರಂದು ಗುರುಪುರ ಗೋಳಿದಡಿಗುತ್ತಿನ ವಾರ್ಷಿಕ `ಗುತ್ತುದ ಪರ್ಬೊ’ವು ಅತ್ಯಂತ ಸರಳ ಮತ್ತು ಸಾಂಪ್ರದಾಯಿಕ ಪಡಿಯಚ್ಚಿನಲ್ಲಿ ನಡೆಯಲಿದೆ.

ಜ. ೧೯ರಂದು ಸಂಜೆ ೭ರಿಂದ ಶ್ರೀ ಕ್ಷೇ ಕ್ಷೇತ್ರ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ' ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜ. ೨೦ರಂದು ಸಂಜೆ ೬ರಿಂದ ೮ರವರೆಗೆ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ, ರಾತ್ರಿ ೮:೩೦ರಿಂದ ೧೦:೩೦ರವರೆಗೆ ದಕ್ಷಿಣ ಭಾರತದ ಮಹಮ್ಮದ್ ರಫಿ ಎಂದೇ ಖ್ಯಾತರಾದ ಠಾಗೋರ್‌ದಾಸ್ ಇವರಿಂದ
ಏಕ್ ಶಾಮ್ ರಫೀಕೆ ನಾಮ್’ ಹಳೆಯ ಹಾಡುಗಳ ರಸಮಂಜರಿ ಸಾದರಗೊಳ್ಳಲಿದೆ. ಜೊತೆಗೆ ಎರಡೂ ದಿನ ಗೋಳಿದಡಿಗುತ್ತಿನಲ್ಲಿ ಶ್ರೀ ವೈದ್ಯನಾಥಾದ್ಯ ಪಂಚದೇವತೆಗಳ ಆರಾಧನೆ, ಭಜನಾ ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮ, ನಿರಂತರ ಊಟೋಪಚಾರ ಮತ್ತು ಅತಿಥಿ ಸತ್ಕಾರ ನಡೆಯಲಿದೆ.

ಏಕಶಿಲಾ ಮೂರ್ತಿ :
ಗುರುಪುರದಲ್ಲಿ ಫಲ್ಗುಣಿ ನದಿ ತಟಾಕದಲ್ಲಿ ಶ್ರೀ ಗುರು ಮಹಾಕಾಲೇಶ್ವರ ದೇವರ ಭವ್ಯ ಏಕಶಿಲಾ ಮೂರ್ತಿ ಕಂಗೊಳಿಸಲಿದೆ. ಮೂರ್ತಿ ನಿರ್ಮಾಣಕ್ಕಾಗಿ ೨೦೨೦ರ ಮೇ ೧೧ರಂದು ವೇಣೂರಿನಿಂದ ೧೮೩ ಟನ್ ಭಾರ, ೨೨ ಅಡಿ ಉದ್ದ, ಒಂಬತ್ತುವರೆ ಅಡಿ ಅಗಲ ಹಾಗೂ ಆರೂವರೆ ಅಡಿ ದಪ್ಪದ ಬೃಹತ್ ಏಕಶಿಲಾ ದಿಬ್ಬವನ್ನು ವಿಶೇಷ ಟ್ರಕ್ ಮೂಲಕ ಇಲ್ಲಿಗೆ ತರಲಾಗಿತ್ತು. ಬೆಳ್ತಂಗಡಿಯ ಲಾಯಿಲದ ವೆಂಕಟೇಶ ಆಚಾರ್ಯ ಮತ್ತು ಬಳಗದ ಶಿಲ್ಪಿಗಳು ಮಹಾಕಾಲನ ಮೂರ್ತಿ ಕೆತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಷ್ಟಿçÃಯ ಹೆದ್ದಾರಿ ೧೬೯ರ ವಿಸ್ತರಣೆ ಕಾಮಗಾರಿ ವೇಳೆ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಹೊಸ ಸೇತುವೆ ಪಕ್ಕದಲ್ಲೇ ದಕ್ಷಿಣ ಭಾರತದಲ್ಲೇ ಪ್ರಥಮವಾದ ಏಕಶಿಲೆಯ ಶ್ರೀ ಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿ ಬಯಲು ಆಲಯ ತಲೆ ಎತ್ತಲಿದೆ. ಈ ಆಲಯದಲ್ಲಿ ದೇಶದಲ್ಲೇ ವಿಶಿಷ್ಟ ರೀತಿಯಲ್ಲಿ ಶ್ರೀ ಮಹಾಕಾಲನ ಆರಾಧನೆ ನಡೆಯಲಿದೆ. ಭವಿಷ್ಯದಲ್ಲಿ ಇದು ಪ್ರವಾಸಿ ಭಕ್ತರು ಹಾಗೂ ಪ್ರಜಾಜನರ ಶ್ರದ್ಧಾ- ಪ್ರೇಕ್ಷಣೀಯ ಕೇಂದ್ರವಾಗುವುದರಲ್ಲಿ ಸಂದೇಹವೇ ಇಲ್ಲ. ನದಿ ತೀರದಲ್ಲಿ ೨೨ ಅಡಿ ಎತ್ತರಕ್ಕೆ ನಿರ್ಮಾಣಗೊಳ್ಳುತ್ತಿರುವ ೫ ಹಂತಗಳ `ಪದ್ಮ’ದ ಒಂದೊAದು ಹಂತದಲ್ಲಿ ವಿವಿಧ ಶಿಲಾ ಕುಸುರಿಯ ಕಲಾಕೃತಿಗಳು ಕಂಗೊಳಿಸಲಿವೆ. ೨೨ ಅಡಿ ಎತ್ತರದ ಪದ್ಮದ ಮೇಲೆ ೨೨ ಅಡಿ ಎತ್ತರದ ಶ್ರೀ ಮಹಾಕಾಲೇಶ್ವರ ದೇವರ ಶಿಲಾಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಭಕ್ತರು ಬಯಲು ಆಲಯದ ಮೇಲೇರಿ ೬ ಹಸ್ತಗಳಿರುವ ಶಿವನ ಮೂರ್ತಿ ಸ್ಪರ್ಶಿಸಿ ಪೂಜೆ ಮಾಡುವ ಅವಕಾಶವಿರುತ್ತದೆ.
“ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ. ಎಸ್. ನಿತ್ಯಾನಂದ ಅವರ ನಿರ್ದೇಶನದಂತೆ ಪುನರುತ್ಥಾನಗೊಳ್ಳುತ್ತಿರುವ ಶ್ರೀ ಮಹಾಕಾಲೇಶ್ವರ ದೇವರ ಬಯಲು ಆಲಯವು ಈ ನಾಡಿನ ಶ್ರದ್ಧಾ ಭಕ್ತಿಯ ಸಾನಿಧ್ಯವಾಗಲಿದೆ. ಈಗಾಗಲೇ ಶೇ. ೮೦ರಷ್ಟು ಕೆತ್ತನೆ ಕೆಲಸ ಮುಗಿದಿದೆ. ಬಯಲು ಆಲಯದ ಬ್ರಹ್ಮಕಲಶ ಪ್ರತಿಷ್ಠಾ ಸಂಭ್ರಮದ ದಿನಾಂಕ ಶೀಘ್ರ ನಿಗದಿಯಾಗಲಿದೆ. ಈ ಪುಣ್ಯಭೂಮಿಯಲ್ಲಿ ಲೋಕಕಲ್ಯಾಣಾರ್ಥ ಗೋಚರಿಸಿರುವಂತೆ ಸರ್ವ ರೀತಿಯಲ್ಲೂ ಕಾಲನ ನಿಯಾಮಕನಾದ ಶ್ರೀ ಗುರು ಮಹಾಕಾಲೇಶ್ವರ ದೇವರು ನಾಡಿನ ಸರ್ವರಿಗೂ ಸುಭಿಕ್ಷೆ ತರಲಿದ್ದಾರೆ” ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ತಿಳಿಸಿದ್ದಾರೆ.