ಭಜನಾಮಂದಿರದಿಂದ ಸಂಸ್ಕಾರದ ಕೆಲಸ: ತಾರನಾಥ ಕೊಟ್ಟಾರಿ
ಬಂಟ್ವಾಳ: ಭಜನಾ ಮಂದಿರಗಳು ಸಾಮಾನ್ಯ ಜನರಿಗೆ ಧಾರ್ಮಿಕ ಪ್ರಜ್ಞೆ, ಪುರಾಣದ ಅರಿವಿನ ಜೊತೆಗೆ ಸಂಸ್ಕಾರವನ್ನು ಕೊಡುವ ಕೆಲಸಗಳನ್ನು ಮಾಡುತ್ತಿದೆ ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ಅವರು ಹೇಳಿದ್ದಾರೆ.

ಬಂಟ್ಚಾಳ ತಾಲೂಕಿನ ಪುದು ಗ್ರಾಮದ ಕುಂಪನಮಜಲು ಶ್ರೀ ಶನೇಶ್ಚರಾಂಜನೇಯ ಮಂದಿರದಲ್ಲಿ ನಡೆದ 25ನೇ ವರ್ಷ ದ ಶನೇಶ್ಚರ ಪೂಜೆ ಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಮಹೇಶ್ ಮೋಟಾರ್ಸ್ ನ ಮಾಲಕರಾದ ಎ.ಕೆ ಜಯರಾಮ ಶೇಕ ವಹಿಸಿದ್ದರು.
ಭಜರಂಗ ದಳದ ಜಿಲ್ಲಾ ಸಂಯೋಜಕರಾದ ಭರತ್ ಕುಂಭ್ಡೇಲು, ಉದ್ಯಮಿಗಳಾದ ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು,ಉಮೇಶ್ ಸಾಲ್ಯಾನ್ ,ಪುದು ವಲಯ ಬಿಲ್ಲವ ಸಂಘದ ಕಾರ್ಯದರ್ಶಿಜಗದೀಶ್ ಪೂಜಾರಿ,ಶನೇಶ್ಚರ ಪೂಜಾ ಸಮಿತಿ ಅಧ್ಯಕ್ಷ ವಾದಿಶ್ ,ಗೌರಾವಾಧ್ಯಕ್ಷರಾದ ವಿಠ್ಠಲ ಶೆಟ್ಟಿ ನೀರೊಲ್ಬ್ , ಸಂಚಾಲಕರಾದ ಶಂಕರ ಸುವರ್ಣ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಸೈನಿಕರಾದ ಜಗನ್ನಾಥ ಶೆಟ್ಟಿ, ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಜನಾರ್ಧನ ನಾಯ್ಕ್, ನಿವೃತ್ತ ಶಿಕ್ಷಕರಾದ ರಾಧಾಕೃಷ್ಣ ಶರ್ಮ , ವಸಂತಿ ಆರ್ ಶರ್ಮ ದಂಪತಿ, ನಿವೃತ್ತ ಶಿಕ್ಷಕ ರಾದ ಕೆ. ಆರ್. ದೇವದಾಸ್ ಕೊಡ್ಮಾಣ್ , ರಾಷ್ಟ್ರ ಪ್ರಶಸ್ತಿ ವಿಜೇತರಾದ ಎ.ಎಸ್. ಐ ರಾಮ ಪೂಜಾರಿ , ಭಜನೆ ಸಂಕೀರ್ತನಗಾರರಾದ ಚಿನ್ನಪ್ಪ ಸುವರ್ಣ , ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದ ಸಾನ್ವಿ ಎಸ್ ರವರನ್ನು ಸನ್ಮಾನಿಸಲಾಯಿತು ಸನ್ಮಾನಿತರನ್ನು ಸುಕೇಶ್ ಶೆಟ್ಟಿ ತೇವು ಪರಿಚಯಿಸಿದರು.
ಮಂದಿರದ ಅಧ್ಯಕ್ಷರಾದ ಎ. ಕೆ.ಗಿರೀಶ್ ಶೆಟ್ಟಿ ಸ್ವಾಗತಿಸಿದರು , ರಿಶಾ ಎಲ್. ಶೆಟ್ಟಿ ವಂದಿಸಿದ್ಫರು