ಬಂಟ್ವಾಳ: ವಾಮನ ಪೂಜಾರಿಯವರಿಗೆ ಕೋಮೊಡು ವೀಲ್ ಚೆಯರ್ ಹಸ್ತಾಂತರ ಮಾಡಿದ ಧರ್ಮಸ್ಥಳ ಸಂಘ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ಫರಂಗಿಪೇಟೆ ಕಾರ್ಯಕ್ಷೇತ್ರದ ಕುಂಪನವಜಲು ವಾಮನ ಪೂಜಾರಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಕೋಮೊಡು ವೀಲ್ ಚೆಯರ್ ಹಸ್ತಾಂತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಾಲೂಕು ತುಂಬೆ ವಲಯದ ಜನಜಾಗೃತಿ ವೇದಿಕೆಯ ಸದಸ್ಯರಾದ ಕೃಷ್ಣಕುಮಾರ್ ಪೂಂಜ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್,ಪರಂಗಿಪೇಟೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅಮಿತಾ, ಸೇವಾಂಜಲಿ ಟ್ರಸ್ಟಿ ಸದಸ್ಯರಾದ ಕೇಶವ ಪೂಜಾರಿ ಕಲ್ಲತಡಮೆ ಹಾಗೂ ದಿನೇಶ್ ಪಕ್ಕಲ್ ಪಾದೆ, ಉಪಸ್ಥಿತರಿದ್ದರು.