Published On: Sun, Jan 12th, 2025

ಬಂಟ್ವಾಳ: “ಕರ್ನಾಟಕದ ದರ್ಶನ’  ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ

ಬಂಟ್ವಾಳ : ಕರ್ನಾಟಕ   ಪ್ರವಾಸೋದ್ಯಮ ಇಲಾಖೆ ರಾಜ್ಯ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ,ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಬಂಟ್ವಾಳ ವತಿಯಿಂದ  2024 25 ನೇ ಸಾಲಿನ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಏರ್ಪಡಿಸಿರುವ “ಕರ್ನಾಟಕದ ದರ್ಶನ’  ಎಂಬ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯ ಪ್ರವಾಸಕ್ಕೆ ಶುಕ್ರವಾರ ಬಂಟ್ವಾಳ ಶಿಕ್ಷಣಧಿಕಾರಿ ಕಚೇರಿ ಅವರಣದಲ್ಲಿ ಚಾಲನೆ ನೀಡಲಾಯಿತು.

“ದೇಶ ಸುತ್ತು ಕೋಶ ಓದು” ಎಂಬ ಮಾತಿನಂತೆ ತರಗತಿ ಕೋಣೆಗಳಿಂದ ಹೊರಗೆ ಶೈಕ್ಷಣಿಕ ವಿಚಾರವಾಗಿ ಅನುಭವವನ್ನು ಪಡೆಯಲು ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಈ  ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ ಹಾಗೂ ಶಿಕ್ಷಣಕ್ಕೆ ಪೂರಕವಾದ ಇಂತಹ ಚಟುವಟಿಕೆಗಳು ಹೆಚ್ಚು ಆಸಕ್ತಿಯನ್ನು ತಂದುಕೊಡುತ್ತವೆ ಎಂದು ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ರವರು  ಶುಭ ಹಾರೈಸಿದರು.


  ಮಕ್ಕಳಿಗೆ  5 ದಿನದ ಪ್ರವಾಸವಾಗಿದ್ದು   ಬೇಲೂರು, ಹಳೇಬೀಡು ಹಂಪಿ,ಅಲೆಮಟ್ಟಿ, ವಿಜಯಪುರ, ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು ಬಾದಾಮಿ, ಅಂಜನಾದಿ, ಮೊದಲಾದ ಕ್ಷೇತ್ರಗಳ ವೀಕ್ಷಣೆಗಾಗಿ ಐದು ದಿನಗಳ ಪ್ರವಾಸ ಹಮ್ಮಿಕೊಳಲಾಗಿದೆ.

ಈ ಸಂದರ್ಭದಲ್ಲಿ  ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಪ್ರಸಾದ್ ರೈ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ  ಅಧೀಕ್ಷಕರಾದ ಪುಷ್ಪರಾಜ್,    ಶಿಕ್ಷಣ ಸಂಯೋಜಕರಾದ , ಪ್ರತಿಮಾ ವೈ ಸುಜಾತ,  ಸುಧಾ, , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯರಾಮ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್,   ಪ್ರಥಮ ದರ್ಜೆ ಸಹಾಯಕರಾದ ಕಿಶೋರ್, ಕಚೇರಿ ಸಿಬ್ಬಂದಿ ಕಾರ್ತಿಕ್,ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ,  ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಘು, ಶಿಕ್ಷಕಿ ವಿಜಯಲಕ್ಷ್ಮಿ, ಚಿತ್ರಕಲಾ ಶಿಕ್ಷಕರಾದ ಮುರಳಿದರ ಆಚಾರ್ಯ ಹಾಗೂ ಸತ್ಯಶಂಕರ  ಉಪಸ್ಥಿತರಿದ್ದರು.


ಸುಮಾರು 75 ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ತೆರಳಿದ್ದಾರೆ.   

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter