ಪಾಣೆಮಂಗಳೂರು- ಆಲಡ್ಕ – ಮೆಲ್ಕಾರ್ ವರೆಗಿನ ರಸ್ತೆ ಮರುಡಾಮರೀಕರಣಕ್ಕೆ ಮನವಿ, ಇಂಜಿನಿಯರ್ ರಿಂದ ಪರಿಶೀಲನೆ
ಬಂಟ್ವಾಳ: ಹದಗೆಟ್ಟು ಸಂಚಾರಕ್ಕೆ ಅಡಚಣೆಯಾಗಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಆಲಡ್ಕರಸ್ತೆಯಾಗಿ ಮೆಲ್ಕಾರ್ ವರೆಗಿನ ರಸ್ತೆಯನ್ನು ಸಂಪೂರ್ಣಡಾಮಾರೀಕರಣಗೊಳಿಸುವ ಮತ್ತು ಚರಂಡಿ ಹೂಳೆತ್ತವುದು,ದುರಸ್ಥಿಯ ಹಿನ್ನಲೆಯಲ್ಲಿಬಂಟ್ವಾಳ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರ ತಂಡ ಶುಕ್ರವಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿತು.

ಸ್ಥಳೀಯ ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರ ಮನವಿಯ ಮೇರೆಗೆಲೋಕೋಪಯೋಗಿಇಲಾಖೆಯ ಇಂಜಿನಿಯರ್ ಗಳಾದ ಜಯಪ್ರಕಾಶ್ ಹಾಗೂ ಅರುಣ್ ಪ್ರಕಾಶ್ ಅವರು ಭೇಟಿ ನೀಡಿ ಪಾಣೆಮಂಗಳೂರು- ಆಲಡ್ಕ- ಮೆಲ್ಕಾರ್ ರಸ್ತೆಗೆ ಮರುಡಾಮರೀಕರಣ ಹಾಗೂ ಚರಂಡಿಯ ಕಾಮಗಾರಿಗೆಸಂಬಂಧಿಸಿದಂತೆ ಅನುದಾನ ಕೋರಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದ್ದಾರೆ.
ಪಾಣೆಮಂಗಳೂರು – ಮೆಲ್ಕಾರ್ ವರೆಗೆ ಸುಮಾರು 1.5 ಕಿಮೀ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ರಸ್ತೆಯ ಗುಂಡಿ ಮುಚ್ಚುವ ಬದಲು ಪೂರ್ತಿ ಡಾಮರೀಕರಣಕ್ಕಾಗಿ ಸದಸ್ಯ ಸಿದ್ದೀಕ್ ಮನವಿ ಸಲ್ಲಿಸಲಿಸಿದ್ದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಅಬುಬಕ್ಕರ ಸಿದ್ದೀಕ್ ಗುಡ್ಡೆಯಂಗಡಿ, ಪಾಣೆಮಂಗಳೂರು ಭಾಗದ ಪ್ರಮುಖರಾದ ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ,ಮೋನಕ್ಕ ಮೆಲ್ಕಾರ್, ಇಕ್ಬಾಲ್ ಬಂಗ್ಲೆಗುಡ್ಡೆ,ಅಜಾರ್ ಆಲಡ್ಕ,ಅನ್ಸಾರ್ ಬಂಗ್ಲೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.