ಬಂಟ್ವಾಳ: ದ.ಕ ಜಿ. ಪಂ.ಮಂಗಳೂರು, ತಾಲೂಕು ಪಂಚಾಯತ್‌ ಬಂಟ್ವಾಳ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜೆಎಸ್ ಡಬ್ಲ್ಯು ಫೌಂಡೇಶನ್‌ ಮತ್ತು ಇಂಡಿಯಾ ವಿಷನ್‌ ಇನ್‌ಸ್ಟಿಟ್ಯೂಟ್‌ ಇದರ ಜಂಟಿ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಬಂಟ್ವಾಳ ತಾಲೂಕು ಪಂಚಾಯತ್‌ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆಯಿತು. ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್‌ ಕುಮಾರ್‌ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳುವುದು ಅತೀ ಅವಶ್ಯ. ಮೊಬೈಲ್‌, ಟಿವಿ ನೋಡುತ್ತಾ ಹೆಚ್ಚಿನ ಜನರು ಕಣ್ಣಿನ ದೃಷ್ಟಿ ಹಾಳು ಮಾಡಿಕೊಳ್ಳುತ್ತಿದ್ದು,ಮುಖ್ಯವಾಗಿ ಯುವ ಸಮುದಾಯ ಈ ಬಗ್ಗೆ ಜಾಗ್ರತೆ ವಹಿಸಿಕೊಳ್ಳಬೇಕು. ಪ್ರತಿಯೊಬ್ಬರು ಕನಿಷ್ಠ ವರ್ಷದಲ್ಲಿ 2 ಬಾರಿಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಜೆಎಸ್ ಡಬ್ಲ್ಯು ಫೌಂಡೇಶನ್‌ ಸಿಎಸ್‌ಆರ್‌ ವ್ಯವಸ್ಥಾಪಕ ಪ್ರದೀಪ್‌ ಕೆ.ಆರ್.‌, ಸಂಸ್ಥೆಯ ಮೂಲಕ ನಡೆಸಲಾಗುತ್ತಿರುವ ಸಾಮಾಜಿಕ ಚಟುವಟಿಕೆ ಮತ್ತು ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನದ ಕುರಿತು ಮಾಹಿತಿ ನೀಡಿದರು.ಸುಮಾರು 170 ಮಂದಿ ಸಾರ್ವಜನಿಕರು ಕಣ್ಣಿನ ತಪಾಸಣೆ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆದರು.

ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕರಾದ ವಿಶ್ವನಾಥ್‌ ಬಿ., ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ವಿನೀತ್‌, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ, ಇಂಡಿಯಾ ವಿಷನ್‌ ಇನ್‌ಸ್ಟಿಟ್ಯೂಟ್‌ನ ಕಾರ್ಯಕ್ರಮ ಸಂಯೋಜಕಿ ಜಾನೆಟ್‌ ಉಪಸ್ಥಿತರಿದ್ದರು. ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕರಾದ ಪ್ರದೀಪ್‌ ಕಾಮತ್‌ ಸ್ವಾಗತಿಸಿದರು. ಎನ್‌ಆರ್‌ಎಲ್‌ಎಂ ತಾಲೂಕು ವಲಯ ಮೇಲ್ವಿಚಾರಕಿ ಕುಸುಮಾ ವಂದಿಸಿದರು.

By suddi9

Leave a Reply

Your email address will not be published. Required fields are marked *