Published On: Wed, Jan 8th, 2025

ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ 53ನೇ ವರ್ಷದ ಏಕಾಹ ಭಜನಾ ಮಹೋತ್ಸವ

ಬಂಟ್ವಾಳ : ಬಂಟ್ವಾಳ ತಾ.ನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.)ಇದರ 53ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಭಾಗವಹಿಸಿ, ಆಶೀರ್ವಾಚನ ನೀಡಿದದರು. ಭಜನೆ ಎಂದರೆ ಸಂಸ್ಕಾರ,ಅದರೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ,ಭಜನೆಯ ಮೂಲಕ ಮನ ಪರಿವರ್ತನೆ ಸಾಧ್ಯವಿದೆ ಎಂದರು.

ಭಾರತ ಆದ್ಯಾತ್ಮಿಕತೆಯ ಬೆಳಕಾಗಿದ್ದು, ಧರ್ಮಕ್ಕೆ ಘಾಸಿಯಾದರೆ ನಮಗೆ ಉಳಿಗಾಲವಿಲ್ಲ,ಧರ್ಮ ರಕ್ಷಣೆಗೆ ನಾವೆಲ್ಲರು ಪಣ ತೊಡೋಬೇಕಾಗಿದೆ ಎಂದ ಶ್ರೀಗಳು ನಮ್ಮ ಮನಸ್ಸನ್ನು ಒಳ್ಳೆಯ ಚಿಂತನೆಯ ಕಡೆಗೆ ಪ್ರೇರೇಪಿಸಿ ಭಗವಂತನು ಕೊಟ್ಟಿರುವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ,ಸರಳ ಭಾಷೆಯಲ್ಲಿ ಭಗವಂತನನ್ನು ಪ್ರಾರ್ಥಿಸಲು ಭಜನೆಯಿಂದ ಸಾಧ್ಯ, ಶ್ರೀರಾಮನ ನಡವಳಿಕೆ ಸಮಾಜಕ್ಕೆ ಆದರ್ಶವಾಗಿದ್ದು,ಜನ ಸಾಮಾನ್ಯರ ಅವಶ್ಯಕತೆಗನುಗುಣವಾಗಿ ಧಾರ್ಮಿಕ ಹಸಿವನ್ನು ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ಭಜನಾ ಮಂದಿರಗಳು ಮಾಡುತ್ತಿದೆ ಎಂದು ಹೇಳಿದರು.

ಸಮಾಜ ಸೇವಕ ನಾರಾಯಣ ಹೊಳ್ಳ ಹೊಳ್ಳರಬೈಲು ಗುತ್ತು,

ವಿಶ್ವಹಿಂದೂ ಪರಿಷತ್ ನ ಪ್ರಚಾರ,ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಮಾತನಾಡಿದರು.ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಭಜನಾ ಮಂದಿರದ ಆಡಳಿತ ಸಮಿತಿಯ ಗೌರವ ಸಲಹೆಗಾರ ಶಶಿಧರ್ ಬ್ರಹ್ಮರಕೂಟ್ಲು,ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕವಿರಾಜ್ ಚಂದ್ರಿಗೆ,ಮಾತೃ ಮಂಡಳಿಯ ಅಧ್ಯಕ್ಷೆ ಗೀತಾ ಆನಂದ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಸ ಮನೋಜ್ ಕನಪಾಡಿ, ಸದಾಶಿವ ಡಿ ತುಂಬೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಕುಮಾರಿ ರಶ್ಮಿತಾ ಭಂಡಾರಿ ಪೆರಿಯೋಡಿಬೀಡು ಇವರನ್ನು ಸನ್ಮಾನಿಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಭಜನಾ ಮಂದಿರದ ಅಧ್ಯಕ್ಷ ನವೀನ ಬಂಗೇರ ಪಲ್ಲ ಪ್ರಸ್ತಾವನೆಗೈದರು, ಪ್ರ. ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿ, ಉತ್ಸವ ಸಮಿತಿಯ ಕಾರ್ಯದರ್ಶಿ ಸಂದೇಶ್ ದರಿಬಾಗಿಲು ವಂದಿಸಿದರು,ರಂಗ ಕಲಾವಿದ ಹೆಚ್. ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ನಾಟಕ ಪ್ರದರ್ಶನಗೊಂದಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter