ಸಜೀಪ: ದೈವಗಳ ನೇಮೋತ್ಸವದ ಸಾಮೂಹಿಕ ದೇವತಾ ಪ್ರಾರ್ಥನೆ

ಬಂಟ್ವಾಳ: ಸಜೀಪ ಮಾಗಣೆ ಪುದ್ದಾರು ಮೆಚ್ಚಿ ಪ್ರಯುಕ್ತ ಸಂಕೇಶ ಭಂಡಾರ ಮನೆಯಲ್ಲಿ ಜರಗುವ ಶ್ರೀ ಉಳ್ಳಾಲ್ತಿ ಶ್ರೀ ದೈಯಂಗುಳು ,ಶ್ರೀ ನಾಲ್ಕೈ ತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವದ ಸಾಮೂಹಿಕ ದೇವತಾ ಪ್ರಾರ್ಥನೆಯನ್ನು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೆರವೇರಿಸಿದರು. ಪಾಲೆ ಮಂಟಪಗುತ್ತು ಕಾಂತಾಡಿ ಗುತ್ತು ಬಿಜಂದಾರ್ ಗುತ್ತು, ಸಜೀಪ ಗುತ್ತು ಮಾಡದಾರಗುತ್ತು, ಗಡಿಪ್ರದಾನರಾದ ರಾಧಾ ಶಶಿಧರ್ ರೈ ಯಾನೆ ನಾರಣ ಆಳ್ವ, ನ ಗ್ರೀಗುತ್ತು ಮೊದಲಾದ ಗುತ್ತು ಮನೆತನದವರು,ಎಸ್. ಶ್ರೀಕಾಂತ ಶೆಟ್ಟಿ, ಸಜೀಪ ಮೂಡ ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಹರೀಶ್ ರೈ ,ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ,ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ಇದೇ ವೇಳೆ ಪೂರ್ವ ಶಿಷ್ಟ ಸಂಪ್ರದಾಯದಂತೆ ಕೋಳಿ ಕುಂಟ ಕಾರ್ಯವು ಜರಗಿತು.