ಬಂಟ್ವಾಳ: ಶ್ರದ್ಧೆ ಭಕ್ತಿಯಿಂದ ಭಗವಂತನ ದರ್ಶನ ಮಾಡಿದಾಗ ಮಾತ್ರ ಮನುಕುಲದ ನಮ್ಮ ಜನ್ಮ ಸಾರ್ಥಕ್ಯಗೊಳ್ಳುತ್ತದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 9ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ 51ನೇ ವರ್ಷದ ದೀಪೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಎಲ್ಲರೂ ಸಾನ್ನಿಧ್ಯದ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸ್ವಾಮಿಯ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಗೌರವ ಮಾರ್ಗದರ್ಶಕರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಪ್ರತಿಯೋರ್ವ ಹಿಂದೂ ಜಾಗೃತರಾದಾಗ ಮಾತ್ರ ನಮ್ಮ ಭೂಮಿ, ನಮ್ಮ ಸಾನ್ನಿಧ್ಯಗಳು ಉಳಿಯಲು ಸಾಧ್ಯ ಎಂದರು.ಇಂತಹ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದರ ಮೂಲಕ ನಮ್ಮ ಮಕ್ಕಳಲ್ಲಿ ಧಾರ್ಮಿಕ ಚಿಂತನೆ, ಧರ್ಮದ ಬಗೆಗಿನ ಗೌರವ, ಸಂಸ್ಕಾರ ಉಳಿಯುವುದು ಎಂದರು.

ಈ ಸಂದರ್ಭದಲ್ಲಿ ಮಂದಿರದ ಸಮಗ್ರ ಅಭಿವೃದ್ಧಿಗಾಗಿ ಹೊಸದಾಗಿ ರಚನೆಗೊಂಡ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಹಾಗೂ ಶಬರಿ ಮಾತೃ ಮಂಡಳಿಗೆ ಡಾ. ಕಮಲಾ ಪ್ರಭಾಕರ ಭಟ್ ಚಾಲನೆ ನೀಡಿದರು. ಮಂದಿರದ ನೂತನ ಕಛೇರಿಯನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ಮಂದಿರದ ಲಾಂಛನವನ್ನು ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿಯವರು ಬಿಡುಗಡೆಗೊಳಿಸಿದರು.

ಇದೇ ವೇಳೆ ಭೂದಾನ ಸಂಕಲ್ಪದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಅಭಿವೃದ್ಧಿ ಸಮಿತಿ ಸಹ ಗೌರವಾಧ್ಯಕ್ಷರಾದ ಲ. ಸುಧಾಕರ ಆಚಾರ್ಯ ಇವರು ನಿಧಿಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷ ಸಂಜೀವ ಗುರುಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ. ರವೀಂದ್ರ ಕಂಬಳಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವಪೂಜಾರಿ ಮತ್ತು ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ ಇವರನ್ನು ಅಭಿನಂದಿಸಲಾಯಿತು. ಟ್ರಸ್ಟ್ ಗೌರವಾಧ್ಯಕ್ಷ ಕೃಷ್ಣ ಗುರುಸ್ವಾಮಿ, ಅಧ್ಯಕ್ಷ ಎನ್. ಪುರುಷೋತ್ತಮ ಪೂಜಾರಿ, ಕಾರ್ಯಾಧ್ಯಕ್ಷ ಡಿ. ಶಶಿಧರ ಆಳ್ವ ದಾಸರಗುಡ್ಡೆ, ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ ಉಪಸ್ಥಿತರಿದ್ದರು. ಟ್ರಸ್ಟ್ ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಯಶವಂತ ಕೆ. ಆಚಾರ್ಯ ಮತ್ತು ಅಶೋಕ್ ಗಟ್ಟಿ ನಂದಾವರ, ತಾರಾ ಭಾಸ್ಕರ್, ಗಣೇಶ್ ಗುಡ್ಡೆಯಂಗಡಿ, ರಂಜಿತ್ ರಾವ್ ಬಟ್ಟಡ್ಕ, ಪ್ರಮುಖರಾದ ಯಶವಂತ ಡಿ. ದೇರಾಜೆಗುತ್ತು ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಪ್ರವೀಣ್ ಗಟ್ಟಿ ಮಾರ್ನಬೈಲು, ವಿಶ್ವನಾಥ ಬೆಳ್ಚಾಡ ಕೂಡೂರು, ಸಂದೀಪ್ ಕುಮಾರ್, ಆನಂದ ಕುಲಾಲ್, ವಿಶ್ವನಾಥ ಆಚಾರ್ಯ, ಸೋಮನಾಥ ಬಿ.ಎಂ. ಭಜನಾ ಸಮಿತಿ ಅಧ್ಯಕ್ಷರಾದ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕೇಶವ ಮಾಸ್ತರ್ ಮಾರ್ನಬೈಲು ಸ್ವಾಗತಿಸಿ, ಕೃಷ್ಣಪ್ಪ ಬಂಗೇರ ಕಂಚಿಲ ವಂದಿಸಿದರು.ಸಮಿತಿಯ ಅಧ್ಯಕ್ಷ ದಾಮೋದರ ಬಿ.ಎಂ. ಮಾರ್ನಬೈಲು ಪ್ರಸ್ತಾವನೆಗೈದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮಕ್ಕೂ ಮುನ್ನ ಮೊದಲು‌ ಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ ವೇ.ಮೂ. ಶಿವಾನಂದ ಐತಾಳರ ವೈದಿಕ ವಿಧಿ ವಿಧಾನಗಳು ನೆರವೇರಿತು.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮಹಾಪೂಜೆ,ಅನ್ನ ಸಂತರ್ಪಣೆ ನೆರವೇರಿತು. ಶಿವರಂಜಿನಿ ಕಲಾಕೇಂದ್ರ ಪೊಳಲಿ,ಬೊಕ್ಕಸ ಇವರಿಂದ ಗಾನಾಮೃತ ಹಾಗೂ ನೃತ್ಯ ವೈಭವ ನಡೆಯಿತು. ಶ್ರೀ ಕೃಷ್ಣ ಗುರುಸ್ವಾಮಿಯವರ ನೇತೃತ್ವದ ತಂಡ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳಿದರು.

By Suddi9

Leave a Reply

Your email address will not be published. Required fields are marked *