ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಕುರುಣೇಂದ್ರ ಪೂಜಾರಿ ಪಂಜಿಕಲ್ಲು ಹಾಗೂ ಉಪಾಧ್ಯಕ್ಷರಾಗಿ ಅದಿರಾಜ್ ಕೆ.ಜೈನ್ ದೇವಸ್ಯಪಡೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳದಲ್ಲಿರುವ ಸಂಘದ ಮುಖ್ಯ ಕಚೇರಿಯಲ್ಲಿ ಶುಕ್ರವಾರ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ಜ್ಯೋತಿ‌ ಅವರು ಚುನಾವಣಾಧಿಕಾರಿಯಾಗಿದ್ದು,ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು.ಸಂಘದ ಸಿಇಒ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದರು.

ನೂತನ ನಿರ್ದೇಶಕರುಗಳಾದ ಸದಾಶಿವ ಶೆಣೈ ಬಂಟ್ವಾಳ ,ಮುರಳೀಧರ ಭಟ್,ವಿಠಲಕೋಟ್ಯಾನ್, ದಿವಾಕರ ಶೆಟ್ಟಿ ಕುಪ್ಪಿಲ,ಚಂದ್ರಶೇಖರ ಭಂಡಾರಿ,ಜಯಕುಮಾರ್,ಪದ್ಮನಾಭಗೌಡ, ಗಣೇಶ್ ದಾಸ್,ಹರೀಶದ ನಾವೂರು,ಜಯಂತಿ ಆಶೋಕ್ ಕುಮಾರ್,ಲಕ್ಷ್ಮೀಪ್ರಭು ಅವರು ಉಪಸ್ಥಿತರಿದ್ದರು.ಸಂಘದ ಆಡಳಿತ ಮಂಡಳಿಗೆ ಇತ್ರೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಹಕಾರ ಪ್ರಕೋಷ್ಠ ಬೆಂಬಲಿ 13 ಮಂದಿ ಅಭ್ಯರ್ಥಿಗಳು ಜಯಭೇರಿ ಗಳಿಸಿದ್ದರು.

By suddi9

Leave a Reply

Your email address will not be published. Required fields are marked *