ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಷನ್ ಬಂಟ್ವಾಳ ಘಟಕದಿಂದ ಪ್ರಮುಖ ಸಭೆ

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಬಂಟ್ವಾಳ ತಾಲೂಕು ವ್ಯಾಪ್ತಿಯ ಘಟಕಗಳ ಪ್ರಮುಖರ ಸಭೆಯು ಬಿ. ಸಿ . ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಷನ್ ನ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಯವರು ಉಪಸ್ಥಿತರಿದ್ದು,ಸೂಕ್ತ ಸಲಹೆಗಳನ್ನು ಸದಸ್ಯರಿಗೆ ನೀಡಿದರು.
ಡಿಸೆಂಬರ್ 31ರಂದು ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಡಾ. ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ “ಯಕ್ಷಧ್ರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನ 2024” ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ಯಕ್ಷ ಶಿಕ್ಷಣ ಪ್ರಮುಖರಾದ ದೀವಿತ್ ಎಸ್. ಕೆ. ಪೆರಾಡಿ, ಜಗನ್ನಾಥ ಚೌಟ, ಭುವನೇಶ್ ಪಚ್ಚಿನಡ್ಕ, ಸರಪ್ಪಾಡಿ ಅಶೋಕ್ ಶೆಟ್ಟಿ, ಸದಾನಂದ ಶೆಟ್ಟಿ ರಂಗೋಲಿ, ಚಿತ್ತರಂಜನ್, ಸತೀಶ್ ಶೆಟ್ಟಿ ಭುಜಂಗ ಸಾಲ್ಯಾನ್, ಶಂಕರ ಶೆಟ್ಟಿ,ಸೇಸಪ್ಪ ಮಾಸ್ಟರ್, ದೇವದಾಸ್ ಶೆಟ್ಟಿ, ಗಣೇಶ್ ರೈ ಮಾಣಿ,ದೇವಪ್ಪ ಪೂಜಾರಿ, ಧನಂಜಯ ಶೆಟ್ಟಿ, ಲೋಕೇಶ್ ಭರಣಿ, ಯಶೋಧರ್ ಶೆಟ್ಟಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.