ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆ
![](https://www.suddi9.com/wp-content/uploads/2024/12/WhatsApp-Image-2024-12-25-at-1.11.33-AM-650x366.jpeg)
ಬಂಟ್ಚಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ 13ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಾಗಿ ಮಲ್ಲಿಕಾ ವಿ.ಶೆಟ್ಟಿ ಅವರು ಸತತ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಯನ್ ಸಚಿನ್ ರೋಡ್ರಿಗಸ್ ಅವರು ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಕೇಂದ್ರ ಕಚೇರಿಯಲ್ಲಿ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕ ಕೆ.ನಾಗೇಂದ್ರ ಅವರು ನಡೆಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ನೂತನ ನಿರ್ದೇಶಕರುಗಳಾದ ನರಸಿಂಹ ಹೊಳ್ಳ ಹೊಳ್ಳರಬೈಲು,ಅಲ್ವಿನ್ ವಿನಯ್ ಲೋಬೋ ಕಿನ್ನಿಬೆಟ್ಡು,ಕಮಲಾಕ್ಷ ಅಮ್ಟಾಡಿ,ವೀಣಾ ಡಿಸೋಜಾ ಬಾಂಬಿಲ,ತುಕರಾಮ ಉದಲೆಕೋಡಿ,ಕಮಲ ಕೆಂಪುಗುಡ್ಡೆ,ಯಶವಂತ ಅಡಪ ಕುರಿಯಾಳ,ಎಡ್ವಡ್೯ ಅಲ್ವಿನ್ ಫೆರ್ನಾಂಡೀಸ್ ಪೆದಮಲೆ,ಹರೀಶ್ ಶೆಟ್ಟಿ ಪಡು,ಬಬಿತಾ ಕೋಟ್ಯಾನ್‌ಅಮ್ಟಾಡಿ,ರೋಶನ್ ಪಿಂಟೋ ಮೂವ ಅವರು ಈ ಸಂದರ್ಭ ಉಪಸ್ಥಿತರಿದ್ದರು.