Published On: Mon, Dec 23rd, 2024

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ, ಮಹಿಳಾ ಮಂಡಲ ಮಂಚಿ ಇದರ 11ನೇ ವರ್ಷದ ವಾರ್ಷಿಕೋತ್ಸವ

ಬಂಟ್ವಾಳ : ಒಂದು ಸಮಾಜವು ಮುಂದುವರಿಯಬೇಕಾದರೆ ಕೇವಲ ಪುರುಷರಿಂದ ಸಾಧ್ಯವಾಗಲಾರದು ಮಹಿಳೆಯರಿಗೂ ಸಮಾನ ಅವಕಾಶ ನೀಡಿ ದೇಶದ ಅಭಿವೃದ್ಧಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಎಂದು ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು. ಶನಿವಾರ (ಡಿ.21) ಮಂಚಿ ಕುಕ್ಕಾಜೆ ಮಹಿಳಾ ಮಂಡಲದ ವಠಾರದಲ್ಲಿ ಜರಗಿದ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮಹಿಳಾ ಮಂಡಲ ಮಂಚಿ, ಕುಕ್ಕಾಜೆ ಇದರ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ “ಗಿರಿಜಾ ರತ್ನ ಪ್ರಶಸ್ತಿ ” ಪ್ರಧಾನ, ಹಾಗೂ ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶೇಕಡಾ 50ರಷ್ಟು ಮಹಿಳೆಯರಾದರೂ ಮುಖ್ಯ ವಾಹಿನಿಗೆ ಬಂದು ಸಮಾಜದ ಜೊತೆ ಬೆರೆತು ಸರಕಾರ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಮಹಿಳಾ ಸಬಲೀಕರಣಕ್ಕೆ ಜೊತೆಯಾಗಬೇಕು,ಆರ್ಥಿಕವಾಗಿ ಹಿಂದುಳಿದ ಹಲವು ಕುಟುಂಬಗಳ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವಲ್ಲಿ ಸಂಸ್ಥೆಯ ನೆರವು ಸೇರಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು, ಸರಕಾರದ ವಿವಿಧ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸುವುದರ ಜೊತೆಗೆ ಬಡ ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಕೆಲಸ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಸಂಸ್ಥಾಪಕರಾದ ಶೈಲಜಾ ರಾಜೇಶ್ ವಹಿಸಿದ್ದರು. ಹಿರಿಯ ಸಮಾಜ ಸೇವಕಿ ಭಾಗೀರಥಿ ಕಾರ್ಯಕ್ರಮ ಉದ್ಘಾಟಿಸಿ, ಮಂಚಿ ಕುಕ್ಕಾಜೆ ಮಹಿಳಾ ಮಂಡಳಿಯನ್ನು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಜೊತೆ ವಿಲೀನಗಳಿಸಿ ಸಂಘದ ಕೀ ಹಾಗೂ ನಡಾವಳಿ ಪುಸ್ತಕ,ಅಧಿಕಾರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕಿ ಭಾಗೀರಥಿ ರವರಿಗೆ ರಾಜ್ಯ ಮಟ್ಟದ “ಗಿರಿಜಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು . ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಜೀವ ಪೂಜಾರಿ ಬಿರ್ವ , ಪದ್ಮನಾಭ ಕೋಟ್ಯಾನ್, ಮನೋಜ್ ಕನಪಾಡಿ, ಸದಾಶಿವ ಡಿ ತುಂಬೆ, ಗಂಗಾಧರ ಆಳ್ವ ತುಂಬೆ, ಯಾಸಿರ್ ಕಲ್ಲಡ್ಕ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ,ಕಿಡ್ನಿ ವೈಫಲ್ಯ ಮತ್ತು ಆಸಕ್ತರಿಗೆ ಸಹಾಯಧನ ವಿತರಿಸಲಾಯಿತು.
ಸಂಸ್ಥೆಯ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರವರನ್ನು ಗೌರವಿಸಲಾಯಿತು.ಮಂಚಿ ಕುಕ್ಕಾಜೆ ಮಹಿಳಾ ಮಂಡಳಿಯ ವತಿಯಿಂದ ಶೈಲಜಾ ರಾಜೇಶ್ ರವರನ್ನು ಸನ್ಮಾನಿಸಲಾಯಿತು.ಮಾಜಿ ಸಚಿವ ರಮನಾಥ ರೈ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ, ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ,ಇರಾ ಬಿಲ್ಲವ ಸಂಘದಅಧ್ಯಕ್ಷ ಜಯರಾಮ ಪೂಜಾರಿ, ಮಾಜಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾದ ಗಣೇಶ್ ಪೂಜಾರಿ, ಹೋಟೆಲ್ ಉದ್ಯಮಿ ಸದಾನಂದ ಬಂಗೇರ, ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ,ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಂತಿ, ಮೋಂತಿಮಾರು ಮಹಿಳಾ ಮಂಡಲ ಅಧ್ಯಕ್ಷ ಜ್ಯೋತಿ ಪ್ರಭು, ತುಳಸಿ, ಮಂಚಿ ಕುಕ್ಕಾಜೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಾರದಮ್ಮ, ಮೋಂತಿಮಾರು ಶಾಲಾ ನಿವೃತ್ತ ಶಿಕ್ಷಕಿ ದೇವಕಿ ಮೊದಲದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರದ ನಂತರ ಸಾರ್ವಜನಿಕ ಅನ್ನಪ್ರಸಾದ್​​ ಕೂಡ ನೀಡಲಾಗಿತ್ತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಸಂಸ್ಥೆಯ ಸಂಸ್ಥಾಪಕರಾದ ಶೈಲಜಾ ರಾಜೇಶ್ ಪ್ರಸ್ತಾವನೆಗೈದು ಸ್ವಾಗತಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter