Published On: Mon, Dec 23rd, 2024

ಬಂಟ್ವಾಳ: ಲೋಕಮಾತೆ ಅಹಲ್ಯ ಬಾಯಿ ಹೋಳ್ಕರ್ ತ್ರಿಶತಾಬ್ದಿ ಆಚರಣೆ

ಬಂಟ್ವಾಳ: ಭಾರತ ದೇಶದಾದ್ಯಂತ 15 ಸಾವಿರಕ್ಕೂ ಹೆಚ್ಚು ಪುರಾತನ ಹಿಂದೂ ದೇವಾಲಯಗಳನ್ನು ಪುನರ್ಜಿವನಗೊಳಿಸಿ ಸನಾತನ ಹಿಂದೂ ಧರ್ಮ ರಕ್ಷಕಿಯಾಗಿ, ಲೋಕಮಾತೆಯಾಗಿ ಬದುಕಿ ಉಳಿದ ವೀರ ಮಹಿಳೆಯರಲ್ಲಿ ಅಹಲ್ಯ ಬಾಯಿ ಹೋಳ್ಕರ್ ಮೊದಲಿಗರಾಗಿದ್ದು ಹಿಂದೂ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಹ ಬೌಧಿಕ್ ಪ್ರಮುಖ್ ಹಾಗೂ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸಂಸ್ಕಾರ ಪರಿವೀಕ್ಷಕಿ ಮೀನಾಕ್ಷಿ ಭಗಿನಿ ರಾಯಿ ಹೇಳಿದರು.

ರಾಷ್ಟ್ರ ಸೇವಿಕಾ ಸಮಿತಿ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಲೋಕಮಾತೆ ಅಹಲ್ಯ ಬಾಯಿ ಹೋಳ್ಕರ್ ತ್ರಿಶತಾಬ್ದಿ ಆಚರಣೆ ಅಂಗವಾಗಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಸುಧಾರಣೆಯಿಂದಾಗಿ ಸಮಾಜದ ಸಮಗ್ರ ಬದಲಾವಣೆ ಸಾಧ್ಯವಿದೆ ಎಂದು ಮನಗಂಡಿರುವ ಅಹಲ್ಯ ರವರು ವಿಧವೆ ಮಹಿಳೆಗೆ ಗೌರವಿಸಿ ವಿಧವೆಗೂ ಮರು ಮದುವೆ ಮಾಡುವ ಸಂಪ್ರದಾಯ ಜಾರಿಗೆ ತಂದ ದೇಶದ ಮೊಟ್ಟ ಮೊದಲ ರಾಣಿ ಅಹಲ್ಯ ಬಾಯಿ ಹೋಳ್ಕರ್ ಎಂದು ಹೇಳಿದರು .

ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ, ರೈತರಿಗೆ ಸಮೃದ್ಧ ಬೆಳೆ ಬೆಳೆಸಲು ಸಹಕಾರಿಯಾಗುವ ಉಚಿತವಾದ ಕೊಡುಗೆಗಳನ್ನು ನೀಡುತಿದ್ದ ಅವರು, ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರೊಂದಿಗೆ ದೇವಸ್ಥಾನಗಳ ಸುತ್ತಲೂ ನೀರಿನ ಕೆರೆಗಳನ್ನು ನಿರ್ಮಿಸುತಿದ್ದರು ಎಂದು ಹೇಳಿದ ಮೀನಾಕ್ಷಿ ಭಗಿನಿ ಅವರು ನಾರಿಯ ಕೈ ಗಳಿಗೆ ಬಳೆಗಳನ್ನು ತೊಡಲು ಗೊತ್ತು ಅವಶ್ಯಕತೆ ಬಂದ್ರೆ ಸಶಶ್ತ್ರ ಗಳನ್ನು ಹಿಡಿಯಲು ಗೊತ್ತು ಎಂಬ ಧೈರ್ಯದ ಮಾತು ಅವರ ಗುಣಗಳು, ಆದರ್ಶಗಳನ್ನು ಭವಿಷ್ಯದ ಸಮಾಜಕ್ಕೆ ಹೇಳಿಕೊಡುವ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಫದ ಅಧ್ಯಕ್ಷ ಪ್ರಭಾಕರ ಪ್ರಭು ಶುಭ ಹಾರೈಸಿದರು. ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಮಂಗಳೂರು ಗ್ರಾಮಾಂತರ ಜೆಲ್ಲೆಯ ಸಹ ಕಾರ್ಯವಾಹಿಕ ಉಷಾ ಮೂಡಬಿದ್ರೆ, ಬಂಟ್ವಾಳ ತಾಲೂಕು ಕಾರ್ಯವಾಹಿಕ ಪನಿಪ ಮಾಣಿ, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಕುಮಾರ್ ರಾಯಿಬೆಟ್ಟು, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್, ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್ ಸಿದ್ದಕಟ್ಟೆ ಶಾಖಾ ಮೆನೇಜರ್ ಜ್ಯೋತಿ, ಸಿದ್ದಕಟ್ಟೆ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಪ್ಯಾಶನ್ ಡಿಸೈನ್ ತರಬೇತಿದಾರೆ ಪ್ರೇಮ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಸಂದೇಶ ಶೆಟ್ಟಿ ಪೂಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ದಿನೇಶ್ ಪೂಜಾರಿ ಹುಲಿಮೇರು,ಮಂದಾರತಿ ಶೆಟ್ಟಿ, ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬೇಬಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರತಿಭಾ ಶೆಟ್ಟಿ, ಪುಷ್ಪ, ಸುಜಾತಾ ಪೂಜಾರಿ, ವಿಮಲಾ ಮೋಹನ್ ಮೂಲ್ಯ,ಪ್ರೇಮಾ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter