ಬಂಟ್ವಾಳ; ಗ್ರಾಮ ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎಸ್ಐ ಮತ್ತು ಪಿಎಫ್ ತರಬೇತಿ ಕಾರ್ಯಗಾರ
ಬಂಟ್ವಾಳ : ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಿಗೆ ಇಎಸ್ಐ ಮತ್ತು ಪಿಎಫ್ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ನ ಕಾರ್ಯ ನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಗ್ರಾಮ ಪಂಚಾಯಿತ್ ಸಿಬ್ಬಂದಿಗಳ ಬೇಡಿಕೆಗಳ ಈಡೇರಿಕೆಗಾಗಿ ಪ್ರಥಮ ಹಂತದಲ್ಲಿ ಇಎಸ್ಐ ಮತ್ತು ಪಿಎಫ್ ನ ಸೌಲಭ್ಯವನ್ನು ವೇತನ ದೊಂದಿಗೆ ನೀಡುವ ಕುರಿತ ತರಬೇತಿ ಕಾರ್ಯಗಾರದ ಸದುಪಯೋಗ ಪಡೆಯುವಂತೆ ತಿಳಿಸಿದರು.
ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಇಎಸ್ಐ ಮತ್ತು ಪಿಎಫ್ ನ್ನು ಅಳವಡಿಸಿ ಕೊಳ್ಳುವಂತೆ ಹೇಳಿದರು.ಪಿಎಫ್ ಇಲಾಖೆ ಅಧಿಕಾರಿ ಟೀಮಾ ರವರು ಪಿಎಫ್ ನ್ನು ಸಿಬ್ಬಂದಿಗಳು ಅಳವಡಿಸುವ ಕುರಿತು ಮಾಹಿತಿ ನೀಡಿದರು.ಇಎಸ್ಐ ಇಲಾಖೆಯ ಸೋಷಿಯಲ್ ಸೆಕ್ಯುರಿಟಿ ಆಫೀಸರ್ ಜಿ ನಾರಾಯಣ ಸ್ವಾಮಿ ಮತ್ತು ಅಸಿಸ್ಟೆಂಟ್ ಸುಪರಿಡೆಂಟ್ ಎಮ್ ಅಶ್ವನಿ ಕುಮಾರ್ ರವರು ಮಾಹಿತಿ ನೀಡಿದರು. ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರಾದ ವಿಜಯಶಂಕರ ಆಳ್ವ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ನ ಸಿಬ್ಬಂದಿ ಅಶೋಕ ಕುಮಾರ್ ಬರಿಮಾರು ಸ್ವಾಗತಿಸಿದರು ,ಸಹಾಯಕ ನಿರ್ದೇಶಕರಾದವಿಶ್ವನಾಥ ಬೈಲಮೂಲೆ ವಂದಿಸಿದರು.