ಬಂಟ್ವಾಳ: ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರದ ಉದ್ಘಾಟನೆ ಮಾಡಿದ ರಾಜೇಶ್ ಕುಮಾರ್
ಬಂಟ್ವಾಳ: ಮಾಣಿ ಗ್ರಾಮ ಪಂಚಾಯತ್ ಮತ್ತು ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಧಾರ ಕಾರ್ಡ್ ತಿದ್ದು ಪಡಿ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಅಂಚೆ ಇಲಾಖಾಧಿಕಾರಿ ರಾಜೇಶ್ ಕುಮಾರ್ ಆಧಾರ್ ಕಾರ್ಡ್ ಜೀವನಕ್ಕೆ ಆಧಾರ. ಸರಿಯಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಹತ್ತು ವರ್ಷಗಳಿಗೊಮ್ಮೆ ಸರಿಯಾದ ಮೂಲ ದಾಖಲೆಗಳನ್ನು ಒದಗಿಸಿ ನವೀಕರಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಧಾರ್ ಕಾರ್ಡ್ ನವೀಕರಣ, ತಿದ್ದುಪಡಿಗೆ ಅನುಕೂಲವಾಗಲೆಂದು ಅಂಚೆ ಇಲಾಖೆಯ ಸಹಕಾರದೊಂದಿಗೆ ಎರಡು ದಿನಗಳ ಶಿಬಿರ ಏರ್ಪಡಿಸಲಾಗಿದೆ.ಸಾರ್ವಜನಿಕ ರು ಮುಂಚಿತವಾಗಿ ಟೋಕನ್ ಪಡೆದುಕೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್,ನಾರಾಯಣ ಶೆಟ್ಟಿ ತೋಟ, ಪ್ರೀತಿ ಡಿನ್ನಾ ಪಿರೇರಾ,ರಮಣಿ ಡಿ.ಪೂಜಾರಿ,ಅಂಚೆ ಇಲಾಖೆಯ ಸುಸ್ಮಿತಾ ರೈ ಇದ್ದರು. ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ,ಪ್ರಸ್ತಾವನೆ ಗೈದರು. ನೂತನ್ ಬಂಗೇರ ಮಾಹಿತಿ ನೀಡಿ ವಂದಿಸಿದರು.