Published On: Thu, Dec 19th, 2024

ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ, 75ವರ್ಷ ತುಂಬಿದ ಸಂಘದ ಸದಸ್ಯರಿಗೆ ಸನ್ಮಾನ

ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ ಪೂಂಜಾ ಅವರು ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು, ನಾವು ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು ಆ ಮೂಲಕ ಜೀವನ ಸಾರ್ಥಕ ಪಡಿಸಬೇಕು ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಪ್ರೊಫೆಸರ್ ಡಾ.ಟಿ.ಕೆ ರವೀಂದ್ರನ್ ಸಭೆಯನ್ನದ್ದೇಶಿಸಿ ಮಾತನಾಡ ಅವರು, ನಿವೃತ್ತರಾದ ಮೇಲೆ ನಿಂತ ನೀರಾಗದೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜ ಮುಖಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಸಹಪಾಠಿಗಳೊಂದಿಗೆ ಬೆರೆಯುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸಿ ಕೆಲವೊಂದು ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದರು.

ಸಂಘದ ಅಧ್ಯಕ್ಷ ರಾದ ಲ. ಪಿ. ಲೋಕನಾಥ ಶೆಟ್ಟಿ ಎಂ ಜೆ ಎಫ್ ರವರು ಸಭಾಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಗತ ವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ವಾಚಿಸಿದರು. ಈ ಕಾರ್ಯಕ್ರದಮಲ್ಲಿ 75ವರ್ಷ ತುಂಬಿದ ಸಂಘದ ಸದಸ್ಯರಾದ ಗೋಪಾಲ ರಾವ್ ಸಂಚಯಗಿರಿ, ಕೆ ಎಚ್. ವಸಂತ ಕುಮಾರ್, ಅಪ್ಪಯ್ಯ ಶೆಟ್ಟಿ, ನರಸಿಂಹ ಭಟ್, ವೆಂಕಟ್ರಮಣ ಭಟ್, ಕು. ಆನಂದಿ, ಟಿ ಕೆ ದಯಾನಂದ, ದಾಮೋದರ ಶೆಟ್ಟಿಗಾರ್, ಲಕ್ಶ್ಮಿ ನೇರಳಕಟ್ಟೆ, ಪದ್ಮನಾಭ ರಾವ್ ಕೈಕುಂಜೆ, ಮಾಧವ ಮಾರ್ಲ ಮೊಡಂಕಾಪು, ಜಿ.ಎ ಭಾವ ಆಮ್ಮುಂಜೆ, ಶ್ ವನಿಲಾ ಅಲೆತ್ತೂರು, ಗೋಪಾಲಕೃಷ್ಣ ರೈ ಬರಿಮಾರ್, ಗೋವರ್ಧನ್ ಶೆಣೈ, ಲಕ್ಶ್ಮಿ ಅಮ್ಮ ಬೊಕ್ಕಸ ಇವರನ್ನು ಸನ್ಮಾನಿಸಲಾಯಿತು.

ಮಹಾಬಲೇಶ್ವರ ಹೆಬ್ಬಾರ್, ಜಯಂತ ಶೆಟ್ಟಿ, ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬಂಗೇರ, ಚಂದು ನಾಯ್ಕರವರು ಸನ್ಮಾನಿತರ ಪಟ್ಟಿ ವಾಚಿಸಿದರು. ಸಂಘದ ಉಪಾಧ್ಯಕ್ಷರರಾದ ಸಂಕಪ್ಪ ಶೆಟ್ಟಿ ಯವರು ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿ ರಾವ್ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಸಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಜತೆಕಾರ್ಯದರ್ಶಿ ಜಯರಾಮ ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಟ್ಟಿ ಸಹಕರಿಸಿದರು.ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter