ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ರಜತ ಮಹೋತ್ಸವ ಸಂಭ್ರಮ, ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟನೆ
ಮಂಗಳೂರು: ಮಂಗಳೂರು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ವಿಭಾಗವು ಅಸ್ತಿತ್ವಕ್ಕೆ ಬಂದು 25 ಸಂವತ್ಸರ ಪೂರೈಸಿದ ಹಿನ್ನಲೆಯಲ್ಲಿರಜತ ಮಹೋತ್ಸವ ಸಂಭ್ರಮ ಮತ್ತು ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಕೆಂಜಾರಿನ ಶ್ರೀ ದೇವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ನಿಧೀಶ್ ಎಸ್ ಶೆಟ್ಟಿ ಇವರು ನೂತನವಾಗಿ ಅಸ್ತಿತ್ವಕ್ಕೆ ಬಂದ ಸಮಾಜಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆಯ ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿದರು.
ಒತ್ತಡ ರಹಿತ ಬದುಕಿನಿಂದ ಮಾನಸಿಕ ಆರೋಗ್ಯ ಸಾಧ್ಯ : ಡಾ.ರಮೀಳಾ ಶೇಖರ್
ಮನುಷ್ಯನ ಮಾನಸಿಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳವುದು ಮುಖ್ಯ, ಈ ನಿಟ್ಟಿನಲ್ಲಿ ಒತ್ತಡ ರಹಿತ ನೆಮ್ಮದಿ ಬದುಕಿನ ಬಗ್ಗೆ ಯುವಜನತೆ ಸಾಗಬೇಕಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ರೋಶನಿ ನಿಲಯದ ನಿವೃತ್ತ ಡೀನ್, ಮನಶಾಂತಿಯ ಮನೋರೋಗ ತಜ್ಞೆ ಡಾ| ರಮೀಳಾ ಶೇಖರ್ ಹೇಳಿದರು.
ಶ್ರೀ ದೇವಿ ಎಜುಕೇಶನ್ ಟ್ರಸ್ ನ ಅಧ್ಯಕ್ಷ ಡಾ| ಸದಾನಂದ ಶೆಟ್ಟಿ ಮತ್ತು ಉಪಾಧ್ಯಕ್ಷ ನಿಧೀಶ್ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರತನ್ ರೈ, ಕಾರ್ಯದರ್ಶಿ ಬಾಲಕೃಷ್ಣ ಭಾತೆ ಇವರನ್ನು ಅಭಿನಂದಿಸಲಾಯಿತು.ಇದೇ ವೇಳೆ ಹಳೆಯ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಅನುಭವಗಳನ್ನು ಹಂಚಿಕೊಂಡರು.
ಶ್ರೀ ದೇವಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಾಂಶುಪಾಲರಾದ ಅಬಿತಾ ಎಸ್ ಸ್ವಾಗತಿಸಿದರು, ಉಪನ್ಯಾಸಕಿ ಅಶ್ವಿನಿ ಆರ್ ಕರ್ಕೇರ ವಂದಿಸಿದರು, ವಿದ್ಯಾರ್ಥಿನಿ ದೀಪಾ ಹಾಗೂ ಮೇಘನಾ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು