ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಆರೋಪಿ ಬಂಧನ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಬಂಧಿಸಲಾಗಿದೆ. ದೆಹಲಿ ವಿಮಾನದಲ್ಲಿ ಎನ್.ಐ.ಎ ಅಧಿಕಾರಿಗಳಿಂದ ಬಂಧನ ಮಾಡಲಾಗಿದೆ.

ವಿದೇಶದಿಂದ ವಾಪಸ್ ಬರುತ್ತಿದ್ದಾಗ ಎನ್.ಐ.ಎ ತಂಡ ಬಂಧಿಸಿದೆ. ಎನ್.ಐ.ಎ‌ ಅಧಿಕಾರಿಗಳು ಈತನ ಪತ್ತೆಗಾಗಿ 5 ಲಕ್ಷ ರಿವಾರ್ಡ್ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ ಎಂದು ಹೇಳಲಾಗಿದೆ. ಹಾಗೂ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ ಎಂದು ಹೇಳಲಾಗಿದೆ. ಎರಡು ಬಾರಿ ಎನ್.ಐ.ಎ ಅಧಿಕಾರಿಗಳು ಶರೀಫ್ ಮನೆಗೆ ದಾಳಿ ಮಾಡಿದ್ದರು.

By suddi9

Leave a Reply

Your email address will not be published. Required fields are marked *