ಅಡ್ಡೂರು ಬರ್ಕೆ ಗುತ್ತು ಶ್ರೀ ಕೊರ್ದಬ್ಬು ತನ್ನಿಮಾನಿಗ ಪರವಾರ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ
ಕೈಕಂಬ: ಅಡ್ಡೂರು ಬರ್ಕೆ ಗುತ್ತು ಶ್ರೀ ಕೊರ್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೆಮೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಡಿ. 15ರಂದು ಭಾನುವಾರ ಜರಗಿತು. ಇದೇ ಸಂದರ್ಭದಲ್ಲಿ ದೈವರಾಜ ಬಬ್ಬು ದೈವದ ದರ್ಶನ ಸೇವೆ ನಡೆಯಿತು.
2025 ಜನವರಿ. 31 ರಂದು ಶುಕ್ರವಾರ ದಿಂದ ಫೆ. 1 ಶನಿವಾರದವರೆಗೆ ಗ್ರಾಮ ದೈವ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳ ವಾರ್ಷಿಕ ನೆಮೋತ್ಸವ ನಡೆಯಲಿದೆ. ಅಲ್ಲದೆ ಜ. 30ರಂದು ಗುರುವಾರ ರಾತ್ರಿ ಬರ್ಕೆ ಮನೆ ಧರ್ಮದೈವಗಳ ಚಾವಡಿಯಲ್ಲಿ ವಾರ್ಷಿಕ ಅಗೆಲು ಸೇವೆ ಕುಟುಂಬದ ವತಿಯಿಂದ ಜರಗಲಿದೆ.
ಜ. 31ರಂದು ಶುಕ್ರವಾರ ಸಂಜೆ 5.ಗಂಟೆಗೆ ಕೊರ್ದಬ್ಬು ದೈವದ ಭಂಡಾರ ಏರುವುದು ಮನರಂಜನೆಗಾಗಿ ಶ್ರೀ ವಿಠ್ಠಲ್ ನಾಯಕ್ ಇವರಿಂದ ವಿನೂತನ ಕಾರ್ಯಕ್ರಮ “ಗೀತಾ- ಸಾಹಿತ್ಯ -ಸಂಭ್ರಮ”
ಬಿಲ್ಲವ ಬಿ. ಗ್ರೇಡ್ ಇದರ ಸಂಸ್ಥಾಪಕರಾದ ಸದಾನಂದ ಪೂಜಾರಿ ಮುಂಡಾಜೆ ಇವರ ಪ್ರಯೋಜಕತ್ವದಲ್ಲಿ ನಡೆಯಲಿದೆ ಎಂದು ರಮೇಶ್ ಬಟ್ಟಾಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು. ಅಡ್ಡೂರು ಬರ್ಕೆ ಗುತ್ತು ಶ್ರೀ ಕೊರ್ದಬ್ಬು ತನ್ನಿಮಾನಿಗ ಪರವಾರ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆಯನ್ನು ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷ ಗಣೇಶ ಪ್ರಸಾದ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಉಮೇಶ್ ಪೂಜಾರಿ, ಕೊರ್ದಬ್ಬು ದೈವ ಪಾತ್ರಿ ಮಧುಚಂದ್ರ ಕುಂದಾಪುರ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ಚಂದ್ರ ಬರ್ಕೆ ,ಬರ್ಕೆಮನೆಯ ದೈವದ ಪರಿಚಾರಕರು, ಕೋರ್ದಬ್ಬು ದೈವದ ಪರಿಚಾರಕರಾದ ಸುಂದರ ಕಾಜಿಲ, ಕಿಶೋರ್ , ನಿಕ್ಕಿ ಹಾಗೂ ಮಹಿಳಾ ಸಮಿತಿ ಸದಸ್ಯರು , ಬರ್ಕೆಮನೆ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಸದಸ್ಯರು,ಅಡ್ಡೂರು ಬರ್ಕೆ ಮನೆಯ ಕುಟುಂಬಸ್ಥರು ಊರಿನ ಗ್ರಾಮಸ್ತರು ಉಪಸ್ಥಿತರಿದ್ದರು