Published On: Sun, Dec 15th, 2024

ಮಾದಕ ವಸ್ತು ಸೇವನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಇನ್ಸ್ ಪೆಕ್ಟರ್ ಅನಂತಪದ್ಮನಾಭ

ಬಂಟ್ವಾಳ: ಮಾದಕ ಪದಾರ್ಥಗಳು ಇತ್ತೀಚೆಗಿನ ದಿನಗಳಲ್ಲಿ ಎಲ್ಲೆಂದರಲ್ಲಿ ವ್ಯಾಪಕವಾಗಿದ್ದು, ಅದರಲ್ಲಿ ಶಿಕ್ಷಣ ಸಂಸ್ಥೆಗಳು ಹೊರತಾಗಿಲ್ಲ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಇದರ ಬಗ್ಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಗಂಭೀರವಾಗಿ ಚಿಂತಿಸಬೇಕಾಗಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಾಆಗಬೇಕಾಗಿದೆ ಎಂದು ಬಂಟ್ವಾಳ ನಗರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಕೆ ವಿ ಅವರು ಹೇಳಿದ್ದಾರೆ.


ಬಂಟ್ವಾಳ ತೌಹೀದ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ ಜಿಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತೌಹಿದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕಿನಲ್ಲಿಯೇ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಮಾದರಿ ಶಾಲೆಯಾಗಿದೆ ಎಂದರು.


ಕಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತಶಾಲಾ ವಿದ್ಯಾರ್ಥಿಯಾದ ಮೊಹಮ್ಮದ್ ಸಾಹಿಲ್ ಮತ್ತು ರಾಜ್ಯಮಟ್ಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ  ಅಹಮದ್ ಅಫಿಲ್ , ಮೊಹಮ್ಮದ್ ರಶ್ವಿನ್ ಮತ್ತು ಅವರಿಗೆ ತರಬೇತು ನೀಡಿದ ಬಶೀರ್ ಕಲ್ಪನೆ, ಹನೀನ್ ಶಾಲಾ ದೈಹಿಕ ಶಿಕ್ಷಕಿಯರಾದ ಗಾಯತ್ರಿ ಬಿ.ಸಿ, ಮಂಜುಳಾ ಶೆಟ್ಟಿ, ಹಾಗೂ ಜಿಲ್ಲಾ ಸಮನ್ವಯ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಅಸ್ಮಾ ಜಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು…..
ಗೇರು ನಿಗಮದ ಮಾಜಿ ಅಧ್ಯಕ್ಷರಾದ  ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು,

ಮುಖ್ಯ ಶಿಕ್ಷಕರಾದ ಇಬ್ರಾಹಿಂ ಸಲೀಂ, ಶಾಲಾ ಅಧ್ಯಕ್ಷರಾದ ರಿಯಾಜ್ ಹುಸೈನ್, ಸಂಚಾಲಕರದ ಅಬ್ದುಲ್ ರಹಿಮಾನ್,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್ ,ಇಮ್ರಾನ್ ಸದಸ್ಯರಾದ ಮೂನಿಶ್ ಅಲಿ,ಹಾರೂನ್ ರಶೀದ್, ಉಬೈದುಲ್ಲಾ ಜುಮಾಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್, ಅರ್ ಬಿ ಪಿ ಟಿ ಎ ಅಧ್ಯಕ್ಷರಾದ ಮುಸ್ತಫಾ ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಸಹಾಯಕ ಮುಖ್ಯ ಶಿಕ್ಷಕಿ ರಚನಾ ವಂದಿಸಿದರು ಶಿಕ್ಷಕಿಯರಾದ ಮಲ್ಲಿಕಾ, ಆಯಿಶಾ ಕಾರ್ಯಕ್ರಮವನ್ನು ನಿರೂಪಿಸಿದರು…

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter