ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಭೋಜನಾಲಯ ಹಾಗೂ ಸುಜ್ಞಾನ ಮಂದಿರ ರಂಗಮಂಟಪ ಉದ್ಘಾಟನೆ

ಬಂಟ್ವಾಳ : ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿಗಳು, ಪೋಷಕರು, ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆ ಗಳ ಸಹಕಾರದಿಂದ 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸ್ವಾಮಿ ವಿವೇಕಾನಂದ ನೂತನ ಭೋಜನಾಲಯ ಹಾಗೂ ಸುಜ್ಞಾನ ಮಂದಿರ ರಂಗಮಂಟಪ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆ ಹಾಗೂ ದೇವಸ್ಥಾನ ಉತ್ತಮ ಸ್ಥಿತಿಯಲ್ಲಿದ್ದರೆ ಊರಿಗೆ ಶೋಭೆ. ಶಾಲೆಯ ಅಭಿವೃದ್ಧಿಗೆ ಊರವರು ಕೈಜೋಡಿಸಬೇಕು. ಸುಸಜ್ಜಿತ ಭೋಜನಾಲಯ ನಿರ್ಮಿಸಲು ಸಹಕರಿಸಿದ ಹಳೆ ವಿದ್ಯಾರ್ಥಿಗಳು ಮತ್ತು ಊರವರು ಅಭಿನಂದಾರ್ಹರು ಎಂದು ಹೇಳಿದರು. ಹಳೆ ವಿದ್ಯಾರ್ಥಿಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದ ಅವರು ಶಾಲೆ ಎಂಬುವುದು ದೇಗುಲವಿದ್ದಂತೆ, ಶಾಲೆ ಮತ್ತು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸಲ್ಲದು ಎಂದರು.
ಇದೇ ವೇಳೆ ಅವರು ಸಭಾಂಗಣಕ್ಕೆ ಫ್ಯಾನ್ ಅಳವಡಿಸಲು ತನ್ನ ಕೊಡುಗೆ ನೀಡುದಾಗಿ ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ್ ರಾವ್ ಅವರು ಸಭಾಂಗಣವನ್ನು ಉದ್ಘಾಟಿಸಿದರು. ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಸಂಗಬೆಟ್ಟು ಗ್ರಾ.ಪಂ.ಸದಸ್ಯರಾದ ಸಂದೇಶ್ ಶೆಟ್ಟಿ ಪೊಡುಂಬ, ಶಕುಂತಳಾ, ಶಾಂತಾ, ಬಂಟ್ವಾಳ ಕ್ಷೇತ್ರ ಶಿಕ್ಷಣಧಿಕಾರಿ ಮಂಜುನಾಥನ್ ಎಂ.ಜಿ.,ಬೆಂಗಳೂರು ಎಟಿಎಸ್ ಡಿವೈಎಸ್‌ಪಿ ರತ್ನಾಕರ್ ಶೆಟ್ಟಿ ಹೊಕ್ಕಾಡಿಗೋಳಿ,ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬೇಬಿ ಕುಂದರ್,ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ಶೆಟ್ಟಿ , ಫಲ್ಗುಣಿ ಸಿದ್ದಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಶಿವಯ್ಯ ಎಸ್.ಎಲ್., ಸಿದ್ದಕಟ್ಟೆ ಹಾ.ಉ.ಸ.ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ,ಸಿದ್ದಕಟ್ಟೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,ತಾ.ಪಂ.ಮಾಜಿ ಸದಸ್ಯ ಅರ್ಕಕೀರ್ತಿ ಇಂದ್ರ ಸಿದ್ದಕಟ್ಟೆ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ದಾಮೋದರ ಶೆಟ್ಟಿಗಾರ್‌ಉಪ್ಪಿರ ,ಸಿದ್ದಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಗಿರೀಶ್ ಭಟ್ ಅಜಕ್ಕಳ,ಸಿದ್ದಕಟ್ಟೆ ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಉದಯ ಕುಮಾರ್,ಬಂಟ್ವಾಳ ತಾ.ಪಂ.ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ ಎನ್.,ಹಳೆ ವಿದ್ಯಾರ್ಥಿನಿ ಪ್ರಜ್ಞಾ ಆಚಾರ್ , ಸಿದ್ದಕಟ್ಟೆ ಸ.ಪ್ರೌ.ಶಾಲಾ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ನೋಣಯ್ಯ ಶೆಟ್ಟಿಗಾರ್, ಶಿಕ್ಷಕರಾದ ಜೋಸ್ಲಿನ್ ಲವಿನಾ ಸಿಕ್ವೆರಾ, ಪೂರ್ಣಿಮಾ, ಬೇಬಿ ಅಮಿನಾ ಶೇಖ್, ಸರೋಜಿನಿ, ಭಾಗ್ಯಶ್ರೀ, ಉಮೇಶ, ಶಮಂತ್, ವಿದ್ಯಾರ್ಥಿ ನಾಯಕ ರಕ್ಷಿತ್, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತಿತರರಿದ್ದರು.
ಈ ಸಂದರ್ಭದಲ್ಲಿ ರಾಜ್ಯ, ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು, ದಾನಿಗಳನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಉಪಾಧ್ಯಕ್ಷ ಉಮೇಶ್ ಗೌಡ ಅವರು ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಲೋನಾ ಲೋಬೋ ಅವರು ಪ್ರಸ್ತಾವಿಸಿದರು. ಶಿಕ್ಷಕಿ ಸ್ಮಿತಾ ಎಂ.ಎಚ್. ವರದಿ ವಾಚಿಸಿದರು. ಸುರೇಖಾ ವಂದಿಸಿದರು. ಶಿಕ್ಷಕ ಮಹೇಶ್ ಕುಮಾರ್ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.