ನಾಣ್ಯ ಕುಲಾಲ ಸುಧಾರಕ ಸಂಘದ ಸೇವಾ ದಳ ರಚನಾ ಸಭೆ

ಬಂಟ್ವಾಳ : ಪುದು ಗ್ರಾಮದ ನಾಣ್ಯ ಕುಲಾಲ ಸುಧಾರಕ ಸಂಘದ ಸೇವಾ ದಳ ರಚನಾ ಸಭೆಯು ನಾಣ್ಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅತಿಥಿಯಾಗಿ ಅರ್ಕುಲ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ದೇವದಾಸ ಕೆ ಆರ್ ಮಾತನಾಡಿ, ಸಂಘಟನೆಯಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಕುಲಾಲ ಸಮಾಜದ ಯುವಕರು ಸೇವಾದಳದ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದರು.
ಸಂಘಟನಾ ಕಾರ್ಯದರ್ಶಿ ನವೀನ ಕೊಡ್ಮಾಣ್ ಚಾಪೆ ಸೇವಾದಳ ಸಮಿತಿ ರಚನೆಯ ಬಗ್ಗೆ ಮಾಹಿತಿ ನೀಡಿದರು. ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಕಮಲ ರಮೇಶ್, ಉಪಾಧ್ಯಕ್ಷ ಸುರೇಶ ಕುಲಾಲ್ ನೆತ್ತರಕೆರೆ, ಹಿರಿಯರಾದ ಆನಂದ ಅಡ್ಯಾರ್, ಕೋಶಾಧಿಕಾರಿ ವಿನಯ ಕುಮಾರ್ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2024-25ರ ನೂತನ ಸೇವಾದಳದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ನೂತನ ದಳಪತಿಯಾಗಿ ಸುದೇಶ್ ಗಂಪದಕೊಡಿ, ಕಾರ್ಯದರ್ಶಿಯಾಗಿ ಸಂದೀಪ ನಾಣ್ಯ ಆಯ್ಕೆಯಾದರು. ವಿವಿಧ ಸ್ಥಳಗಳಿಗೆ ಉಪ ದಳಪತಿ ಹಾಗೂ ಕಾರ್ಯದರ್ಶಿಗಳನ್ನು ನೇಮಕಗೊಳಿಸಲಾಯಿತು.