ಬಂಟ್ವಾಳ: ಕೋಟಿ ಚೆನ್ನಯ ಕ್ರೀಡೋತ್ಸವದ ಕುರಿತು ಸಮಾಲೋಚನಾ ಸಭೆ, ಆಮಂತ್ರಣ ಪತ್ರ ,ಅದೃಷ್ಟ ಚೀಟಿ ಪುಸ್ತಕ ಬಿಡುಗಡೆ

ಬಂಟ್ವಾಳ : ಬಂಟ್ವಾಳ ತಾಲೂಕಿನ ಸಜಿಪ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದಲ್ಲಿ ಇಂದು (ಡಿ.12) ಜನವರಿಯಲ್ಲಿನಡೆಯುವ ಕೋಟಿ ಚೆನ್ನಯ ಕ್ರೀಡೋತ್ಸವದ ಕುರಿತು ಸಮಾಲೋಚನಾ ಸಭೆ ನಡೆಯಿತು. ಇದೇ ವೇಳೆ ಕೋಟಿ ಚೆನ್ನಯ ಕ್ರೀಡೋತ್ಸವದ ಆಮಂತ್ರಣ ಪತ್ರ ಹಾಗೂ ಅದೃಷ್ಟ ಚೀಟಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾದ ರಮೇಶ್ ಅನ್ನಪ್ಪಾಡಿ, ಗೌರವಾಧ್ಯಕ್ಷರಾದ ಕೆ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಕಾರ್ಯದರ್ಶಿಯಾದ ಅಶ್ವಿನ್ ಪೂಜಾರಿ ಕಾರಾಜೆ, ಗಿರೀಶ್ ಕುಮಾರ್ ಪೆರ್ವ ಮೋಹನದಾಸ್ ಪೂಜಾರಿ ಬೊಳ್ಳಾಯಿ ಜಯಶಂಕರ್ ಕಾನ್ಸಾಲೆ, ಶೈಲೇಶ್ ಪೂಜಾರಿ, ಲೋಕೇಶ್ ಪೂಜಾರಿ ಸುಭಾಸ್ ನಗರ ಮಹೇಶ್ ಪಟ್ಟುಗುಡ್ಡೆ, ವಿಜಯ ಗುರುಮಂದಿರ ಪುರುಷತ್ತಮ ಮಿತ್ತಕಟ್ಟ ಸುಂದರ ಪೂಜಾರಿ ಬೋಳಂಗಡಿ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ.ಸಂಜೀವ ಪೂಜಾರಿ ಗುರುಕೃಪಾ, ಕೋಶಾಧಿಕಾರಿ ಆನಂದ ಸಾಲ್ಯಾನ್ ಶಂಬೂರು, ಜತೆ ಕಾರ್ಯದರ್ಶಿ ರಾಜೇಶ್ ಸುವರ್ಣ, ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿಯ ಸಂಚಾಲಕರಾದ ಬೇಬಿ ಕುಂದರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿ ಗಣೇಶ್ ಪೂಂಜರೆಕೋಡಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಸದಸ್ಯ ಉದಯ ಮೇನಾಡು ಉಪಸ್ಥಿತರಿದ್ದರು.