ಬಂಟ್ವಾಳ: ಜನರ ಆರ್ಥಿಕ ಹೊರೆ ನಿವಾರಿಸಲು ರಾಜ್ಯ ಸರಕಾರ ಪಂಚಗ್ಯಾರಂಟಿ ಯೋಜನೆ; ಬಿ.ರಮಾನಾಥ ರೈ
ಬಂಟ್ವಾಳ: ಜನರ ಆರ್ಥಿಕ ಹೊರೆ ನಿವಾರಿಸಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.ಯೋಜನೆಯಿಂದ ಮಹಿಳೆಯರಿಗೆ ಅರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಅವರು ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ನಡೆದಿರುವ ಪಂಚ ಗ್ಯಾರಂಟಿ ವಿಲೇವಾರಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನುಷ್ಠಾನ ಸಮಿತಿ ದ.ಕ.ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯು ಯಶಸ್ವಿಯಾಗಿದ್ದು, ಕೆಲವೇ ಕೆಲವು ಮಂದಿಗೆ ತಲುಪಿಲ್ಲ. ಈ ನಿಟ್ಟಿನಲ್ಲಿ ಅನುಷ್ಠಾನ ಬಂಟ್ವಾಳ ಸಮಿತಿ ಶಿಬಿರದ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ,ಬಂಟ್ವಾಳ ತಾ.ಪಂ.ಸಿಇಒ ಸಚಿನ್ ಕುಡ ಮಾತನಾಡಿದರು.ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಜಯಂತಿ, ಅನುಷ್ಠಾನ ಸಮಿತಿ ಜಿಲ್ಲಾ ಉಪಾದ್ಯಕ್ಷ ಜೋಕಿಂ ಡಿಸೋಜ, ಬೆಳ್ತಂಗಡಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಅರಳ ಪಿಡಿಒ ಧರ್ಮರಾಜ್,ಪಿಲಾತಬೆಟ್ಟು ಪಿಡಿಒ ಯಮುನಪ್ಪ., ಇರ್ವತ್ತೂರು ಪಿಡಿಒ ನಿಶಾಂತ್, ಅನುಷ್ಠಾನ ಸಮಿತಿ ಸದಸ್ಯರಾದ ಐಡಾ ಸುರೇಶ್, ಚಂದ್ರಶೇಖರ ಆಚಾರ್ಯ, ಸುಽಂದ್ರ ಶೆಟ್ಟಿ, ಮಹಮ್ಮದ್ ಸಿರಾಜ್, ಸತೀಶ್, ಮುರಳೀಧರ ಪೈ, ವಿನಯ್ ಕುಮಾರ್, ಕಾಂಚಲಾಕ್ಷಿ, ಹರ್ಷನ್ ಬಿ., ಪವಿತ್ರಾ ಕೆ. ಅಬ್ದುಲ್ ಮಜೀದ್, ಜನಾರ್ದನ, ಕೃಷ್ಣಪ್ಪ ಪೂಜಾರಿ, ಅಬ್ದುಲ್ ಕರೀಂ, ನಾರಾಯಣ ನಾಯ್ಕ್, ಗ್ರಾ.ಪಂ. ಸದಸ್ಯರಾದ ಪ್ರಮುಖರಾದ ಮಲ್ಲಿಕಾ ಶೆಟ್ಟಿ, ಲವಿನಾ ಮೋರಾಸ್, ಗ್ರಾ.ಪಂ.ಸದಸ್ಯರಾದ ಉದಯ ಕುಮಾರ್ ಶೆಟ್ಟಿ, ರಮಾನಂದ ಬೆದ್ರಕಾಡು, ಅಣ್ಣು ಪೂಜಾರಿ, ರೇಖಾ, ಆನಂದ ಆಚಾರ್ಯ, ನಾಗೇಶ್, ಜಯಂತಿ ಪೂಜಾರಿ, ಲಿತೇಶ್, ಭಾರತಿ ಗಟ್ಟಿ, ನೆಲ್ವಿಸ್ಟರ ಪಿಂಟೊ, ಪುಷ್ಪಲತಾ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ,ಉದ್ಯೋಗ ಖಾತರಿ ಯೋಜನೆ, ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ. ಸಿಬಂದಿ ವರ್ಗ ಭಾಗವಹಿಸಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೋಯಲ್ ಪ್ರಶಾಂತ್ ಫೆಲಿರೊ ಸ್ವಾಗತಿಸಿದರು. ಭಾರತಿ ರಾಜೇಂದ್ರ ವಂದಿಸಿದರು. ಗ್ರಾ.ಪಂ.ಸದಸ್ಯ ನವೀನಚಂದ್ರ ಶೆಟ್ಟಿ ಮತ್ತು ಭರತ್ ಕುಮಾರ ಜೈನ್ ಕಾರ್ಯಕ್ರಮ ನಿರೂಪಿಸಿದರು.