ಬಂಟ್ವಾಳ: ಕಲ್ಲಡ್ಕ ಕ್ರೀಡೋತ್ಸವಕ್ಕೆ ಹೋಗಿ ಬರುವೇ ಎಂದು ಹೋದ ವ್ಯಕ್ತಿ ನಾಪತ್ತೆ
ಬಂಟ್ವಾಳ: ಕಲ್ಲಡ್ಕ ಸಮೀಪದ ಅಮ್ಟೂರು ನಿವಾಸಿ ಪ್ರಕಾಶ್ ಎಂಬುವವರು ಕಲ್ಲಡ್ಕದಲ್ಲಿ ನಡೆಯುವ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಪ್ರಕಾಶ್ ( 40) ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಅಮ್ಟೂರಿನಲ್ಲಿ 15 ದಿನಗಳ ಹಿಂದೆಯಷ್ಠೆ ಬಾಡಿಗೆ ಮನೆಯೊಂದಕ್ಕೆ ಬಂದಿದ್ದ ಪ್ರಕಾಶ್, ಅದಕ್ಕೂ ಮೊದಲು ಶಂಭೂರಿನಲ್ಲಿ ವಾಸವಾಗಿದ್ದರು.
ಬಿ.ಸಿ.ರೋಡಿನ ಸೋಮಯಾಜಿ ಇಂಡಸ್ಟ್ರೀಸ್ ಲಿ.ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ಇವರು ಶನಿವಾರ ರಾತ್ರಿ ಸುಮಾರು 7 ಗಂಟೆಯ ಹೊತ್ತಿಗೆ ಕಲ್ಲಡ್ಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಸಂಸ್ಥೆಯಲ್ಲಿ ಹೇಳಿ ಹೋದವರು ವಾಪಾಸ್ ಸಂಸ್ಥೆ ಮತ್ತು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿದ್ದು ಮನೆಯವರು ಆತಂಕಕ್ಕೊಳಗಾಗಿದ್ದಾರೆ,ಇವರ ಪತ್ನಿ
ಜಯಶ್ರೀ ಅವರು ನೀಡಿರುವ ದೂರಿನ ಪ್ರಕಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.