ಅಂಗನವಾಡಿ ಕೇಂದ್ರದ ಶಿಕ್ಷಕಿ, ಪ್ರಥಮ ವರ್ಷದ ಪುಣ್ಯ ಸ್ಮರಣೆ, ನುಡಿ ನಮನ,ಮಾಜಿ ಸಿಎಂಗೂ ಶೃದ್ಧಾಂಜಲಿ ಸಮರ್ಪಣೆ
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಶಿಕ್ಷಕಿ, ಇಲ್ಲಿನ ಉಪ್ಪುಗುಡ್ಡೆ ನಿವಾಸಿ ಪ್ರೇಮಾ ಟೀಚರ್ (೫೨) ಅವರು ಹಠಾತ್ ನಿಧನಕ್ಕೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಥಮ ವರ್ಷದ ಪುಣ್ಯ ಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮವು ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆಯಿತು.

ಅಂಗನವಾಡಿ ಕೇಂದ್ರದ ನೂತನ ಶಿಕ್ಷಕಿ ದೀಪ್ತಿ ಎನ್ ಅವರು ಅಗಲಿದ ಶಿಕ್ಷಕಿ ಪ್ರೇಮಾ ಅವರ ಬಗ್ಗೆ ಸಂಸ್ಮರಣಾ ಭಾಷಣಗೈದರು. ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಗುಡ್ಡೆಅಂಗಡಿ ಅಂಗನವಾಡಿ ಶಿಕ್ಷಕಿ ವಿನ್ನಿಫ್ರೆಡ್ ಅವರು ನುಡಿನಮನ ಸಲ್ಲಿಸಿದರು.
ಇದೇ ವೇಳೆ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೂ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಬಾಲವಿಕಾಸ ಸಮಿತಿ ಸದಸ್ಯೆ ಗಾಯತ್ರಿ ಭಟ್, ಆಶಾ ಕಾರ್ಯಕರ್ತೆ ಜ್ಯೋತಿ ಲಕ್ಷ್ಮೀ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಸಹಾಯಕಿ ಜ್ಯೋತಿ, ರೆಂಗೇಲು, ಉಪ್ಪುಗುಡ್ಡೆ, ಜೈನರಪೇಟೆ, ಬೊಂಡಾಲ ಹಾಗೂ ಗುಡ್ಡೆಅಂಗಡಿ ಅಂಗನವಾಡಿ ಶಿಕ್ಷಕಿಯರಾದ ಬಬಿತ, ಹರಿಣಾಕ್ಷಿ, ಶಶಿಕಲಾ, ವೀಣಾ ಹಾಗೂ ವಿನ್ನಿಫ್ರೆಡ್, ಪ್ರಮುಖರಾದ ಇಕ್ಬಾಲ್ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಪಿ ಬಿ ಎಚ್, ಅಬ್ದುಲ್ ಮಜೀದ್ ಮೊದಲಾದವರು ಭಾಗವಹಿಸಿದ್ದರು.