ಮಂಚಿ ರೈತರ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಚುನಾವಣೆಯಲ್ಲಿ 12 ಕ್ಕೆ 12 ಸ್ಥಾನವು ಬಿಜೆಪಿ ಸಹಕಾರಿ ಪ್ರಕೋಷ್ಠಕ್ಕೆ

ಬಂಟ್ವಾಳ:ಎರಡು ದಶಕಗಳ ಬಳಿಕ ಬಂಟ್ವಾಳ ತಾಲೂಕಿನ ಮಂಚಿ ರೈತರ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿ ಬಿಜೆಪಿ ಸಹಕಾರಿ ಪ್ರಕೋಷ್ಠದ ಬೆಂಬಲಿತರ ಪಾಲಾಗಿದೆ.ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸಹಕಾರಿ ಪ್ರಕೋಷ್ಠದ ಬೆಂಬಲಿತ 12 ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ್ದಾರೆ.ಕೇಶವ ರಾವ್,ಅಶೋಕ್ ಸಿ.,ಮೋಹನ್ ದಾಸ ಶೆಟ್ಟಿ,ನಿಶಾಲ್ ಶೆಟ್ಟಿ,ಸುರೇಶ್ ಕೊಟ್ಟಾರಿ,ದೇವಿಪ್ರಸಾದ್ ಸಿ.ಕೆ., ಆಶಾ ಪ್ರಭು,ನಳಿನಿ ರೈ,ಗೋಪಾಲ,ಜಗದೀಶ್ ಎಸ್ ಶೆಟ್ಟಿ,ಚಂದಪ್ಪ ಕಂಚಿನಡ್ಕ,ನಾರಾಯಣ ನಾಯ್ಕ ಅವರು ಜಯಗಳಿಸಿರುವ ಅಭ್ಯರ್ಥಿಗಳಾಗಿದ್ದರು.
ಕಳೆದ ಎರಡು ದಶಕಗಳ ಬಳಿಕ ಬಿಜೆಪಿ ಬೆಂಬಲಿತ ಸಹಕಾರಿ ಪ್ರಕೋಷ್ಠದ ಅಭ್ಯರ್ಥಿಗಳು 12 ಕ್ಕೆ 12 ಸ್ಥಾನಗಳಲ್ಲಿಯು ಜಯಭೇರಿ ಗಳಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. 12 ಸ್ಥಾನದಲ್ಲೂ ದಿಗ್ವಿಜಯ ಸಾಧಿಸಿದ ಬಿಜೆಪಿ ಸಹಕಾರಿ ಪ್ರಕೋಷ್ಠದ ಬೆಂಬಲಿತ ಅಭ್ಯರ್ಥಿಗಳಿಗೆ ಹಾಗೂ ಸಹಕಾರಿ ಮತದಾರರಿಗೆ ಈ ಚುನಾವಣೆಯ ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದ ಬಂಟ್ವಾಳ ಮಂಡಲದ ఎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಬಂಟ್ಚಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮೊದಲಾದವರು ಅಭಿನಂದನೆ ಸಲ್ಲಿಸಿದ್ದಾರೆ.